December 3, 2025
WhatsApp Image 2024-07-27 at 3.00.33 PM

ಮಂಗಳೂರು : ವಿದ್ಯಾರ್ಥಿಗಳನ್ನು ಮದ್ಯಪಾರ್ಟಿ ಮಾಡಲು ನಗರದ ದೇರೆಬೈಲ್‌ನಲ್ಲಿ ನೂತನವಾಗಿ ಆರಂಭಗೊಂಡಿದ್ದ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ವಿಶೇಷ ಆಫರ್ ನೀಡಿತ್ತು. ಇದರ ಬೆನ್ನಲ್ಲೇ ಅಬಕಾರಿ ಇಲಾಖೆ ಹೊಟೇಲ್ ಮೇಲೆ ಎಫ್ಐಆರ್‌ ದಾಖಲು ಮಾಡಿದೆ. ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ವಿದ್ಯಾರ್ಥಿಗಳು ಹಾಗೂ ಅಪ್ರಾಪ್ತರಿಗೆ ಸ್ಪೂಡೆಂಟ್ಸ್ ನೈಟ್ಸ್ ಹೆಸರಿನಲ್ಲಿ ಮದ್ಯಸೇವಿಸಲು ಆಫರ್ ನೀಡಿತ್ತು. ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟ‌ರ್ ವ್ಯವಸ್ಥೆ ಇದೆಯೆಂದು ಪಾರ್ಟಿ ಆಯೋಜಕರು ಆಫರ್ ನೀಡಿದ್ದರು. ಲಿಕ್ಕರ್ ಲಾಂಜ್ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದಾರೆ. ಸದ್ಯ ಲಿಕ್ಕರ್ ಲಾಂಜ್‌ನಲ್ಲಿ ಆಯೋಜನೆ ಆಗಿದ್ದ ಪಾರ್ಟಿಗೆ ಕಾವೂರು ಪೊಲೀಸರು ತಡೆ ನೀಡಿ ಬಾರ್ ಮಾಲಕನಿಗೆ ನೋಟೀಸ್ ನೀಡಿದ್ದಾರೆ.

About The Author

Leave a Reply