October 12, 2025
WhatsApp Image 2024-07-31 at 11.29.11 AM

ಹೊಸದಿಲ್ಲಿ : ಪ್ರತಿಕೂಲ ಹವಾಮಾನದಿಂದಾಗಿ ವಯನಾಡ್ ನ ಭೂಕುಸಿತ ಪ್ರದೇಶಗಳಿಗೆ ಬುಧವಾರ ನಿಗದಿಯಾಗಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಭೇಟಿ ರದ್ದಾಗಿದೆ.  ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಯನಾಡ್‌ ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಿಯಾಂಕಾ ಮತ್ತು ನನ್ನ ಭೇಟಿ ಜು. 31ರಂದು ನಿಗದಿಯಾಗಿತ್ತು.

ಆದರೆ, ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ನಾವು ಅಲ್ಲಿ ಇಳಿಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಆದಷ್ಟು ಬೇಗ ವಯನಾಡ್ ಗೆ ಭೇಟಿ ನೀಡುತ್ತೇವೆ ಎಂದು ನಾನು ವಯನಾಡ್ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ವಯನಾಡಿನ ಜನರೊಂದಿಗೆ ನಾವು ನಿಲ್ಲುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ

About The Author

Leave a Reply