ವಿಟ್ಲ; ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ, ನಿವೃತ್ತ ಪ್ರಾಂಶುಪಾಲ ಕೆ.ಸುಬ್ಬಣ್ಣ ಭಟ್(80) ಅವರು ಜು.30ರ ಮಂಗಳವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಕಮ್ಮಾಜೆ ಮನೆತನದ ಕೆ.ಸುಬ್ಬಣ್ಣ ಭಟ್, ಉಪನ್ಯಾಸಕರಾಗಿ ಕೊಂಬೆಟ್ಟು, ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಭಡ್ತಿ ಪಡೆದು ಕನ್ಯಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.
ಸುಬ್ಬಣ್ಣ ಭಟ್ ಅವರು ಕನ್ಯಾನ ಶ್ರೀ ಮಲರಾಯ ದೈವಸ್ಥಾನ ಮತ್ತು ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು
ಮೃತರು ತಾಯಿ, ಸಹೋದರ, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.