October 21, 2025
WhatsApp Image 2024-09-04 at 6.57.24 PM

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಹಳೆಯದಾದ ದೊಡ್ಡ ಮರಗಳ ಕೊಂಬೆಗಳು ಗಾಳಿ ಮಳೆಗೆ ತುಂಡಾಗಿ ಬೀಳುವ ಸಾಧ್ಯತೆಯಿದ್ದು, ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ಜನಸಂಚಾರವಿರುವುದರಿಂದ ಜನಸಾಮಾನ್ಯರಿಗೆ ತುಂಬಾ ಅಪಾಯಕಾರಿಯಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಅಪಾಯಕಾರಿಯಾದ ಮರದ ಕೊಂಬೆಗಳನ್ನು ಕಡಿಯಬೇಕೆಂದು ಎಸ್‌ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ನೀಡಿ ಮನವಿಯನ್ನು ಸಲ್ಲಿಸಿದರು.

ಎಸ್‌ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಅಹಮದ್ ಬಶೀರ್, ಕಾರ್ಯದರ್ಶಿ ಅನ್ಸಾರ್ ಅಮೆಮ್ಮಾರ್, ಉಪಾಧ್ಯಕ್ಷ ಸಿದ್ದೀಕ್ ಫರಂಗಿಪೇಟೆ, ಸದಸ್ಯರಾದ ಸಿರಾಜಿ ಕುಂಪನಮಜಲ್, ಇರ್ಫಾನ್, ಆಶ್ರಫ್ ಮತ್ತಿತರರು ನಿಯೋಗದಲ್ಲಿದ್ದರು.

About The Author

Leave a Reply