ಬೆಂಗಳೂರು: ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಮೊಟ್ಟೆಯನ್ನು ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಕಾರದೊಂದಿಗೆ ವಾರದ ಆರು ದಿನ ವಿತರಿಸುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 25 ರಂದು ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ . ಸೆಪ್ಟಂಬರ್ ತಿಂಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದ ಆರು ದಿನವೂ ಮೊಟ್ಟೆ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು. ಆದ್ದರಿಂದ ಸೆ.25 ರಿಂದ ನಾಲ್ಕು ದಿನದ ಮೊಟ್ಟೆ ವೆಚ್ಚವನ್ನು ಅಜೀಯ್ ಪ್ರೇಮ್ ಜೀ ಪ್ರತಿಷ್ಠಾನ ಭರಿಸಲಿದೆ. ಈ ಸಂಬಂಧ ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರದಲ್ಲಿ ಎರಡು ದಿನ ಸರ್ಕಾರದಿಂದ, 4 ದಿನ ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನದಿಂದ ಮೊಟ್ಟೆ ವಿತರಿಸುವ ಕುರಿತಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಪೂರಕ ಪೌಷ್ಟಿಕ ಆಹಾರ ನೀಡಲು ಮೂರು ವರ್ಷಗಳಿಗೆ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಗೆ ಸುಮಾರು 1,500 ಕೋಟಿ ರೂ. ವೆಚ್ಚವಾಗಲಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತದೆ.ಮಕ್ಕಳಿಗೆ ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ಸಿಗುವ ನಿರೀಕ್ಷೆಯಿದೆ.