
ಬಂಟ್ವಾಳ: ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ನಡೆದಿದೆ.



ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅದ್ದೂರಿಯಾಗಿ ಆಚರಿಸಿದರು. ಪ್ರಚೋದನಕಾರಿ ಹೇಳಿಕೆಯಿಂದ ಸಂಘಪರಿವಾರದ ಕಾರ್ಯಕರ್ತರು ಬಿಸಿ ರೋಡಿನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು. ಇದೆಲ್ಲದರ ನಡುವೆ ಮಾಣಿಯಲ್ಲಿ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆಗೆ ಪಾತ್ರರಾದರು.
ಅಲ್ಲದೆ ಅಂತ್ಯದಿನದವರೆಗೂ ನಮ್ಮ ಊರಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.