Visitors have accessed this post 430 times.
ಉಡುಪಿ: ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಕೃಷ್ಣಾನಂದ ಪ್ರಭು ಆರ್.ವಿ. ಮಾರ್ಗದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಸೈರೋಝ್ ಮಂಡಿಸಿದ ‘‘ಸೆರುಮ್ ಮೈಕ್ರೋ ನ್ಯೂಟ್ರಿನ್ಟ್ಸ್, ಥೈರಾಯ್ಡ್ ಪ್ರೊಫೈಲ್ ಆ್ಯಂಡ್ ಪ್ಲೆಸೆಂಟಲ್ ಥೈರಾಯ್ಡ್ ಹಾರ್ಮೋನ್ ರಿಸೆಪ್ಟರ್ ಎಕ್ಸ್ ಪ್ರೆಶನ್ ಇನ್ ಪ್ರಗ್ನೆನ್ಸಿ ಔಟ್ ಕಮ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿಶ್ವ ವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಇವರು ಮೂಳೂರಿನ ರಜಬ್ ಬ್ಯಾರಿ ಹಾಗೂ ಹಫ್ಸಾ ದಂಪತಿ ಪುತ್ರಿ. ಇವರ ಪಿಎಚ್‌ಡಿ ಸಂಶೋಧನೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಅನುದಾನ ನೀಡಿದೆ.