November 8, 2025
WhatsApp Image 2024-09-15 at 11.02.17 AM

ವಿಟ್ಲ,: ಹಾಡಹಗಲೇ ಮನೆಯ ಹಿಂಬಾಗಿಲು ಮರಿದು ಒಳನುಗ್ಗಿದ ಕಳ್ಳರು ಕಪಾಟು ತೆರೆದು ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ಕುಂಟುಕುಡೇಲು ನಿವಾಸಿ ಲೀಲಾ ಕೆ. ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸೆ.17ರಂದು ಬಂಟ್ವಾಳ ಕುಂಟುಕುಡೇಲು ಎಂಬಲ್ಲಿರುವ ನನ್ನ ಮನೆಯ ಬಾಗಿಲುಗಳನ್ನು ಭದ್ರಪಡಿಸಿ, ಮಗಳೊಂದಿಗೆ ಕೊಡುಂಗಾಯಿಗೆ ತೆರಳಿ ಮಧ್ಯಾಹ್ನ ವಾಪಸ್ ಬಂದಿದ್ದೇನೆ. ಈ ವೇಳೆ ಮನೆಯ ಹಿಂಭಾಗದ ಬಾಗಿಲನ್ನು ಕಳ್ಳರು ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿತ್ತು. ಒಳಗಡೆ ಪ್ರವೇಶಿಸಿ ನೋಡಿದಾಗ ಮನೆಯ ಕೋಣೆಯೊಂದರ ಕಪಾಟಿನಲ್ಲಿ ಇರಿಸಿದ್ದ, ಒಟ್ಟು 36 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ 1,46,000 ರೂ. ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply