
ಇಂದು ತುಮಕೂರಿನ ಚರ್ಚ್ ವೃತ್ತದ ಬಳಿ ಇರುವ ಹಿಂದೂ ಮಹಾಸಭಾ ಗಣಪತಿಯ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಹಿಂದೂಪರ ಮುಖಂಡ ಪುನೀತ್ ಕೆರೆಹಳ್ಳಿ ಭಾಷಣ ಮಾಡಬೇಕಾಗಿತ್ತು, ಆದರೆ ವಿವಾದಾತ್ಮಕ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.



ಹೌದು ಪೊಲೀಸರಿಂದ ಹಿಂದೂ ಪರ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಬಳಿರುವ ಜಾಸ್ ಟೋಲ್ ಬಳಿ ಬಂಧಿಸಲಾಗಿದೆ. ತುಮಕೂರಿನ ಚರ್ಚ್ ವೃತ್ತದಲ್ಲಿ ಪುನೀತ್ ಕೆರೆಹಳ್ಳಿ ಭಾಷಣ ಮಾಡಬೇಕಾಗಿತ್ತು. ವಿವಾದಾತ್ಮಕ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಯನ್ನು ಇದೀಗ ತುಮಕೂರು ಪೊಲೀಸರು ಬಂಧಿಸಿದ್ದಾರೆ.