Visitors have accessed this post 643 times.
ಸುಳ್ಯ : ಸಹಪಾಠಿಗಳು ವಿದ್ಯಾರ್ಥಿಯೋರ್ವನ ಗುಪ್ತಾಂಗವನ್ನು ಹಿಡಿದೆಳೆದು ಗಾಯಗೊಳಿಸಿರುವ ಘಟನೆ ಸುಬ್ರಹ್ಮಣ್ಯದ ಸಂಪಾಜೆಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ವಿದ್ಯಾರ್ಥಿಗಳು ಚೇಷ್ಟೆ ಮಾಡಲು ಹೋಗಿ ಸಂಪಾಜೆಯ ಆಲಡ್ಕ ನಿವಾಸಿ 12 ವರ್ಷದ ಬಾಲಕನ ಜನನಾಂಗಕ್ಕೆ ಆಂತರಿಕವಾಗಿ ಗಾಯವಾಗಿದೆ. ಸದ್ಯ ಗಾಯಾಳು ಬಾಲಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಾಲಕ ಸಂಪಾಜೆಯ ಹಾಸ್ಟೆಲ್‌ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಸೆ.14ರಂದು ರಾತ್ರಿ ಹಾಸ್ಟೆಲ್‌ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಗುಪ್ತಾಂಗ ಹಿಡಿದೆಳೆದಿದು ಗಾಯಗೊಳಿಸಿದ್ದರು ಎನ್ನಲಾಗಿದೆ. ಇದರಿಂದ ಬಾಲಕನಿಗೆ ಮೂತ್ರ ವಿಸರ್ಜನೆ ವೇಳೆ ತೀವ್ರನೋವು ಕಾಣಿಸಿಕೊಂಡಿದೆ. ಆದ್ದರಿಂದ ಬಾಲಕ ಮನೆಗೆ ಬಂದಿದ್ದಾನೆ. ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ತಿಳಿದುಬಂದಿದೆ. ವೆಸ್ಲಾಕ್ ನಲ್ಲಿ ಶುಕ್ರವಾರ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಪಾಜೆ ಪೊಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.