November 8, 2025
WhatsApp Image 2024-09-28 at 8.31.07 AM

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಗೆ ದಿನಾಂಕ 26-09-2024 ರಂದು ಅಂತಾರಾಷ್ಟ್ರೀಯ ಗೌರವಾಧ್ಯಕ್ಷ ಡಾ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಪ್ರಪ್ರಥಮ ಬಾರಿಗೆ ಆಗಮಿಸಿದ್ದು ಅವರನ್ನು ಉಡುಪಿ ಜಿಲ್ಲಾ ಘಟಕ ವತಿಯಿಂದ ಸನ್ಮಾನಿಸಲಾಯಿತು, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತಾ ಕಳೆದ 50 ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ವಿದೇಶದಲ್ಲಿದ್ದರೂ ತನ್ನ ಹುಟ್ಟುರು (ಉಡುಪಿ ಜಿಲ್ಲೆಯ ತೋನ್ಸೆ ) ಜನ್ಮಭೂಮಿಯ ಮೇಲಿನ ಪ್ರೀತಿ ಅಪಾರವಾಗಿರುವ ಡಾ ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್ ದುಬೈ ರವರು ಸಾಧ್ಯವಾದಷ್ಟು ಜನರ ಸಂಘ ಸಂಸ್ಥೆಗಳಿಗೆ ಸಹಕಾರ ನೀಡುತ್ತಾ ತುಳು ನಾಡಿನ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಹಾಯ ನೀಡುತ್ತಾ ಬಂದಿರುವವರಾಗಿರುತ್ತಾರೆ. ಅವರನ್ನು ಶಾಲು ಪೇಟ ಮಾಲೆ ಫಲವಷ್ತು ಸ್ಮರಣಿಕೆ ನೀಡಿ ಸನ್ಮಾನಿಸಿದ್ದರು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಆಲಿಸ್ ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್ ಜೊತೆಗಿದ್ದರು.

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ ಕೊಳಲಗಿರಿ, ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ ಪೂಜಾರಿ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಕುಂದಾಪುರ ತಾಲೂಕು ಅಧ್ಯಕ್ಷ ಸತೀಶ್ ಖಾರ್ವಿ, ವೈದ್ಯರ ಘಟಕ ಜಿಲ್ಲಾಧ್ಯಕ್ಷ ಡಾ. ಸಂದೀಪ್ ಸನಿಲ್, ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ , ತುಳುನಾಡ ರಕ್ಷಣಾ ವೇದಿಕೆ ಹಿತೈಷಿ ಅನಿವಾಸಿ ಭಾರತೀಯ ರೋಕಿ ಆಲ್ಮಡಾ ಕೆನಡಾ ಸುನಂದ ಟೀಚರ್, ಉಮೇಶ್ ಶೆಟ್ಟಿ , ಅನಿಲ್ ಪೂಜಾರಿ, ಸುಭಾಷ್ ಸುಧನ್ , ಅನುಸೂಯ ಶೆಟ್ಟಿ ,ಅರುಣ್ ಪೂಜಾರಿ , ರತ್ನಾಕರ್ ಮೊಗವೀರ, ರೋಷನ್ ಬಂಗೇರ, ಜ್ಯೋತಿ, ಶರ್ಮಿಳ ಮೆಂಡನ್, ರವಿಜ , ಹರೀಶ್ ಶೆಟ್ಟಿ , ಪ್ರೀತಮ್ ಡಿಕೋಸ್ಥಾ, ಸಲಾವುದ್ದೀನ್ , ಸದಾಶಿವ ಗುಲಾಬಿ , ವಿಜಯಲಕ್ಷ್ಮಿ ಹೆಗ್ಡೆ, ಮತ್ತಿತರರು ಡಾ. ಡೇವಿಡ್ ಫ್ರ್ಯಾಂಕ್ ಫರ್ನಾಂಡಿಸ್ ಮತ್ತು ಆಲಿಸ್ ಫ್ರ್ಯಾಂಕ್ ಫರ್ನಾಂಡಿಸ್ ರವರಿಗೆ ಶುಭ ಹಾರೈಸಿದರು.

About The Author

Leave a Reply