ಮಂಗಳೂರು : ಕರ್ನಾಟಕ ಕರಾವಳಿಯ ಮೀನುಗಾರಿಕಾ ಕಾರ್ಮಿಕರ ಸಮಾವೇಶ

ಮಂಗಳೂರು : ಕರ್ನಾಟಕ ಕರಾವಳಿಯ ಮೀನುಗಾರಿಕಾ ಕಾರ್ಮಿಕರ ಸಮಾವೇಶವು ಮಂಗಳೂರಿನ ವುಡ್ ಲ್ಯಾಂಡ್ ನಲ್ಲಿ ಜರುಗಿತು.ದ.ಕ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಮಂಗಳೂರು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನು ಮೀನುಗಾರಿಕಾ ಕಾರ್ಮಿಕ ಫೆಡರೇಶನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಉಮರ್ ಸಾಹೇಬ್ ಒಟ್ಟುಮಲ ಉದ್ಘಾಟಿಸಿದರು.

ದೇಶದ ಆಹಾರ ಭದ್ರತೆಗೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಮೀನುಗಾರಿಕಾ ಕ್ಷೇತ್ರದಲ್ಲಿ ತನ್ನ ಜೀವವನ್ನು ಪಣಕ್ಕಿಟ್ಟು ತೊಡಗಿಸಿಕೊಂಡಿರುವ ಕೋಟ್ಯಾಂತರ ಕಾರ್ಮಿಕರು ದುಡಿಯುತ್ತಿದ್ದು, ಆ ಕಾರ್ಮಿಕರ ಶ್ರಮಕ್ಕೆ ಯಾವುದೇ ಸರಕಾರವು ತಕ್ಕ ಪರಿಗಣನೆ ನೀಡದಿರುವುದು ಘೋರ ಅಪರಾಧವುದು ಅವರು ವಿಷಾದಿಸಿದರು. ಮೀನುಗಾರಿಕಾ ಕ್ಷೇತ್ರದ ಕಾರ್ಮಿಕರನ್ನು ಸಾಮಾಜಿಕ ಜೀವನದ ಮುನ್ನಲೆಗೆ ತರುವಂತಹ ಯೋಜನೆಗಳನ್ನು ಸಿದ್ದಪಡಿಸಬೇಕೆಂದು ಅವರು ಸರ್ಕಾರಗಳನ್ನು ಒತ್ತಾಯಿಸಿದರು.

ಸಭೆಯಲ್ಲಿ ವಿವರವಾದ ಚರ್ಚೆಯ ಬಳಿಕ ಸ್ವತಂತ್ರ ಮೀನುಗಾರಿಕಾ ಕಾರ್ಮಿಕ ಫೆಡರೇಶನ್ (ಎಸ್.ಟಿ.ಯು) ನೊಂದಿಗೆ ನೋಂದಾಯಿತವಾದ ಕರ್ನಾಟಕ ರಾಜ್ಯ ಸ್ವತಂತ್ರ ಮೀನುಗಾರಿಕಾ ಕಾರ್ಮಿಕ ಫೆಡರೇಶನ್ ಸ್ಥಾಪಿಸಿ ಆ ಕ್ಷೇತ್ರದ ಕಾರ್ಮಿಕ ಹಿತಾಸಕ್ತಿ ಮತ್ತು ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಲು ನಿರ್ಧರಿಸಲಾಯಿತು. ಅದಕ್ಕಾಗಿ ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲಾಯಿತು ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಮುಹಮ್ಮದ್ ಸ್ವಾಲಿಹ್ ಬೆಂಗರೆ ರಾಜ್ಯ , ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ ಅಬ್ಬಾಸ್ ತಲಪಾಡಿ , ರಾಜ್ಯ ಉಪಾಧ್ಯಕ್ಷರಾಗಿ ರಿಯಾಝ್ ಹರೇಕಳ ಕೋಶಾಧಿಕಾರಿಯಾಗಿ ಎಚ್ ಮುಹಮ್ಮದ್ ಇಸ್ಮಾಯಿಲ್ ,ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಉಳ್ಳಾಲ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೌಶಾದ್ ಮಲಾರ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ಎ.ಎಸ್.ಇ ಕರೀಮ್ ಕಡಬ , ಸಿ ಅಬ್ದುರ್ರಹ್ಮಾನ್ ಮಂಗಳೂರು ಮತ್ತು ಅಡ್ವಕೇಟ್ ಸುಲೈಮಾನ್ ಮಂಗಳೂರು ಅವರನ್ನು ಸಲಹಾ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಎಸ್.ಟಿ.ಯು ಮೀನುಗಾರಿಕಾ ಕಾರ್ಮಿಕರ ಫೆಡರೇಶನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಶಾಹುಲ್ ಹಮೀದ್ ಅವರು ಕಾರ್ಯಕರ್ತರಿಗೆ ಸಂಘಟನೆಯ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.ಶಬೀರ್ ಅಬ್ಬಾಸ್ ತಲಪಾಡಿ ಸ್ವಾಗತಿಸಿ , ಎಚ್. ಇಸ್ಮಾಯಿಲ್ ವಂದಿಸಿದರು.

Leave a Reply