Visitors have accessed this post 994 times.

ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ ಹನಿಟ್ರ್ಯಾಪ್ ಕೇಸ್ – ಆರೋಪಿಗಳ ಪತ್ತೆಗೆ ಲುಕ್ ಔಟ್ ನೋಟಿಸ್‌

Visitors have accessed this post 994 times.

ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ವಿರುದ್ಧ ನಡೆದ ಹನಿಟ್ರ್ಯಾಪ್ ಕೇಸ್ ಹಿಂದಿದ್ದ ಆರೋಪಿಗಳ ತಂಡ ತಲೆಮರೆಸಿಕೊಂಡಿದ್ದು, ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕಮಿಷನರ್‌ ಅನುಪಮ್ ಅಗರ್ವಾಲ್, ರೆಹಮತ್ ಎಂಬಾಕೆ ಹಾಗೂ ಆಕೆಯ ಸಹಚರರಾದ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್ ಮತ್ತು ಸಿರಾಜ್ ಒಟ್ಟು ಸೇರಿ ಮುಮ್ತಾಜ್ ಅಲಿಯವರ ಸೆಕ್ಸ್ ವೀಡಿಯೊ ಬಳಸಿಕೊಂಡು ಬ್ಲ್ಯಾಕ್ ಮೇಲ್ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಮುಮ್ತಾಜ್ ಅಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡ ವಾಯ್ಸ್ ಮೆಸೇಜ್‌ನಲ್ಲಿ ಕೆಲ ಆರೋಪಿಗಳ ಹೆಸರನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಆರೋಪಿಗಳು 50 ಲಕ್ಷಕ್ಕೂ ಅಧಿಕ ಹಣ ದೋಚಿದ ಆರೋಪ ಎದುರಿಸುತ್ತಿದ್ದಾರೆ. ಈ ಮೊತ್ತದಲ್ಲಿ 25 ಲಕ್ಷವನ್ನು ಚೆಕ್ ಮೂಲಕ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಲೆಮರೆಸಿಕೊಳ್ಳುವ ಪ್ರಯತ್ನದ ಬೆನ್ನಲ್ಲೇ, ಅವರೆಲ್ಲ ವಿದೇಶಕ್ಕೆ ಹೋಗದಂತೆ ಲುಕ್‌ಔಟ್‌ ನೋಟಿಸ್‌ (ಎಲ್ಒಸಿ) ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

Leave a Reply

Your email address will not be published. Required fields are marked *