Visitors have accessed this post 169 times.

ಗ್ರಾ.ಪಂಚಾಯತ್ ಸಿಬ್ಬಂದಿಗಳು ನೌಕರರ ಮುಷ್ಕರ ನಡೆಯುತ್ತಿದ್ದು,ಪಂಚಾಯತ್ ರಾಜ್ ಸಚಿವರು ಅಕ್ಟೋಬರ್ 10 ಕ್ಕೆ ಸಭೆ ಕರೆದಿರುವಾಗ ಉಡುಪಿ-ದ.ಕ ಜಿಲ್ಲಾಮಟ್ಟದಲ್ಲಿ ಮುಷ್ಕರಕ್ಕೆ ಅರ್ಥವಿಲ್ಲ:ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ

Visitors have accessed this post 169 times.

ಪಂಚಾಯತ್ ಸಿಬ್ಬಂದಿ, ನೌಕರರ ಬೇಡಿಕೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದೇವೆ,ನಿನ್ನೆಯವರೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಟನೆಗೆ ನೈತಿಕ ಬೆಂಬಲ ನೀಡಿದ್ದೇವೆ.ಈ ಮುಷ್ಕರಕ್ಕೆ ರಾಜ್ಯ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಇಲಾಖಾ ಮುಖ್ಯಸ್ಥರು ಅಕ್ಟೋಬರ್10 ನೇ ತಾರೀಕಿಗೆ ಸಭೆ ಕರೆದಿರುವಾಗ ಜಿಲ್ಲಾ ವ್ಯಾಪ್ತಿಯಲ್ಲಿ ಮುಷ್ಕರ ಮುಂದುರಿಸಿರುವುದಕ್ಕೆ ಅರ್ಥವಿಲ್ಲ.
ಯಾವುದೇ ಸರಕಾರಗಳು ಇತ್ತಿಚಿನ ವರ್ಷಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ವಿಫಲವಾಗಿದ್ದು,ಈ ಹಿಂದಿನ ಬಿಜೆಪಿ ಸರಕಾರ ಯಾವುದೇ ಸ್ಪಂದನೆ ನೀಡಿರಲಿಲ್ಲ.ಈ ಹಿಂದಿನ ಸರಕಾರದ ಸಂದರ್ಭದಲ್ಲಿಯೂ ನಾವು ಪಂಚಾಯತ್ ನೌಕರರ ಪರವಾಗಿ ನಾವು ಬೇಡಿಕೆ ನೀಡಿದ್ದರೂ ಯಾವುದೇ ಸ್ಪಂದೆನೆ ದೊರಕಲಿಲ್ಲ.ಈಗಲೂ ಪಂಚಾಯತ್ ಸಿಬ್ಬಂದಿಗಳು,ನೌಕರರು ಬಾರಿ ಸಂಕಷ್ಟದಲ್ಲಿರುವುದು ಸತ್ಯ.ಸಿಬ್ಬಂದಿಗಳು ನೌಕರರು ತಮ್ಮ ಬೇಡಿಕೆಗೆ ಸರಕಾರ ಮಟ್ಟದಲ್ಲಿ ಗಮನಹರಿಸುವುದು ಅವರ ಹಕ್ಕಾಗಿರುತ್ತದೆ.ಪಂಚಾಯತ್ ರಾಜ್ ಬಲಪಡಿಸುವಲ್ಲಿ ಕರ್ನಾಟಕ ರಾಜ್ಯ ಜವಾಬ್ದಾರಿ ಎಷ್ಟಿದೆಯೋ ಕೇಂದ್ರ ಸರಕಾರದ ಜವಾಬ್ದಾರಿಯೂ ಅಷ್ಟೇ ಇದೆ,ಕೇಂದ್ರ ಸರಕಾರದ ಲೋಪದೋಷಗಳು ಕೂಡ ಇರುವುದು ಸತ್ಯವಾಗಿದೆ.ಗ್ರಾ.ಪಂಚಾಯತುಗಳಿಗೆ 15ನೇ ಹಣಕಾಸಾಗಲಿ,ಉದ್ಯೋಗ ಖಾತರಿ ಯೋಜನೆಗೆ ಆಗಲಿ ವರ್ಷದಿಂದ ವರ್ಷಕ್ಕೆ ಶೇಕಡಾ 10 % ಹೆಚ್ಚಳವಾಗಬೇಕಾಗಿದ್ದ ಅನುದಾನ ಹೆಚ್ಚಳವಾಗದೆ ಕಡಿತಗೊಳಿಸಲಾಗಿದೆ ಇದರಿಂದ ಅಭಿವೃದ್ಧಿಗಳು ಕುಂಟಿತವಾಗುತ್ತಿದೆ.ಗ್ರಾ.ಪಂಚಾಯತ್ ಗಳು ಸ್ವಂತ ನಿಧಿಯಿಂದಲೇ ಅಭಿವೃದ್ಧಿಗಳಿಗೂ ಬಳಕೆ ಮಾಡುವ ಮತ್ತು ನೌಕರರಿಗೆ ವೇತನವೂ ನೀಡುತ್ತಿರುವುದರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.ಉಭಯ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತು ಈ ಸಂಧರ್ಭದಲ್ಲಿ ರಾಜಕೀಯ ದುರ್ಬಳಕೆಯಾಗುವ ಅವಕಾಶ ಇರುವುದರಿಂದ ಜಿಲ್ಲಾ ಮಟ್ಟದ ಮುಷ್ಕರಕ್ಕೆ ಸಹಮತವಿಲ್ಲ ಎಂದು ಅಭಿಪ್ರಾಯಪಟ್ಟರು.ಗ್ರಾಮ ಪಂಚಾಯತ್ ಸ್ಥಗಿತಗೊಂಡಿರುವುದರಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ.ಜನಸಾಮಾನ್ಯರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಅಕ್ಟೋಬರ್10 ಸಚಿವರ ಸಭೆಯ ನಂತರ ನಿರ್ದಾರ ಮಾಡಬಹುದಾಗಿದೆ ಎಂದು ತಿಳಿಸಿದರು.

ದ.ಕನ್ನಡ ರಾಜೀವ್ ಪಂಚಾಯತ್ ರಾಜ್ ಸಂಘಟನೆಯೂ ರಾಜ್ಯ ಸರಕಾರದ ಲೋಪದೋಷಗಳನ್ನು ಸರಿಪಡಿಸುವಂತೆ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಸಮಾವೇಶದಲ್ಲಿ ಸಂಬಂಧಪಟ್ಟ ಸಚಿವರಲ್ಲಿ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ,ಅಲ್ಲದೆ ದ.ಕ.ಉಡುಪಿ ಸ್ಥಳೀಯ ಸಂಸ್ಥೆಯ ನಮ್ಮ ಪ್ರತಿನಿಧಿ ಶಾಸಕರಾದ ಮಂಜುನಾಥ ಭಂಡಾರಿಯವರು ಪ್ರತಿ ವಿಧಾನ ಮಂಡಲದ ಅಧಿವೇಶನದಲ್ಲಿ ದ್ವನಿಯೆತ್ತುವ ಮೂಲಕ ಪಂಚಾಯತ್ ಸದಸ್ಯರ,ಸಿಬ್ಬಂದಿ,ನೌಕರರ ನ್ಯಾಯಯುತವಾದ ಹಲವಾರು ಬೇಡಿಕೆಗೆ ಸ್ಪಂದಿಸಿರುತ್ತಾರೆ,ಮುಂದೆಯೂ ನಮ್ಮೊಂದಿಗೆ ಸಹಕರಿಸುವ ಭರವಸೆ ಇದೆ ಎಂದು ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿಯವರ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *