ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ – ಆಯಿಷಾ ಅರೆಸ್ಟ್

ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎ ಒನ್ ಆರೋಪಿ ಆಗಿರುವ ರೆಹಮದ್ ಅಲಿಯಾಸ್ ಆಯೇಷಳನ್ನು ಪೊಲೀಸರು ಬಂಧಿಸಿದ್ದಾರೆ.

 

ಹೌದು ನಾಪತ್ತೆಯಾದ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ನಿನ್ನೆ ಕಾವೂರು ಪೊಲೀಸ್ ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್‌ಐಆರ್ ದಾಖಲಾಗಿತ್ತು. ಘಟನೆ ಬಳಿಕ ಎ ಒನ್ ಆರೋಪಿಯಾಗಿರುವ ಆಯೇಷಾ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೇರಳಕ್ಕೆ ಪರಾರಿಯಾಗಿದ್ದಳು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೇ?

ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಒಬ್ಬಳು ಮುಮ್ತಾಜ್ ಅಲಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದ್ದು, ಈ ಒಂದು ಬ್ಲಾಕ್ ಮೇಲ್ ಗೆ ಮಹಿಳೆಯ ಪತಿ ಕೂಡ ಸಾತ್ ನೀಡಿದ್ದಾನೆ ಎಂದು ತಿಳಿದುಬಂದಿದೆ.ಹೌದು ಮಹಿಳೆ ಬ್ಲ್ಯಾಕ್ಮೇಲ್ ಗೆ ಆಕೆ ಪತಿಯೇ ಸಾತ್ ನೀಡಿದ್ದ ಎನ್ನಲಾಗುತ್ತಿದೆ. ರಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಬ್ಲಾಕ್ ಮೇಲ್ ಮಾಡಲಾಗಿತ್ತು. ಇದಕ್ಕೆ ಆಕೆಯ ಪತಿ ಕೂಡ ಬ್ಲಾಕ್ ಮೇಲ್ ಮಾಡಲು ಸಹಕರಿಸಿದ್ದಾನೆ. ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್ ರೆಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಅಲಿಗೆ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು.

ಆಯಿಷಾ ಪತಿ ಸಹ ಪತ್ನಿಯ ಬ್ಲಾಕ್ ಮೇಲ್ ಗೆ ಸಾತ್ ನೀಡಿದ್ದ ಪ್ರಕರಣದಲ್ಲಿ ಆಯೇಷಾ ಪತಿ ಶೋಯೆಬ್ ಎಂಬಾತ A5 ಆರೋಪಿ ಆಗಿದ್ದಾನೆ. ಆಯೇಷಾಳ ಮಗುವಿನ ಜೊತೆಗೆ ಮುಮ್ತಾಜ್ ಅಲಿ ಆಟ ಆಡುತ್ತಿರುವ ವಿಡಿಯೋವನ್ನು ಆಯೇಷಾ ವಾಟ್ಸಪ್ ಸ್ಟೇಟಸ್ ಹಾಕಿದ್ದಳು. ಇದರಿಂದ ಮಮ್ತಾಜ್ ಅಲಿ ಮನೆಯಲ್ಲಿ ರಾತ್ರಿಯವರೆಗೂ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. 28 ಗಂಟೆಗಳ ಕಾರ್ಯಾಚರಣೆ ಬಳಿಕ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಮಮ್ತಾಜ್ ಅಲಿ ಅವರ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂದು ದೂರಿನಲ್ಲಿ ಅವರ ಸಹೋದರ ಉಲ್ಲೆಖಿಸಿದ್ದಾರೆ ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಮ್ತಾಜ್ ಅಲಿ ಆತ್ಮಹತ್ಯೆಗೆ ಸಂಬಂಧಪಟ್ಟ ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಓ ಸಿ ಜಾರಿ ಮಾಡಿದ್ದೇವೆ. ನಿನ್ನೆ ಮುಂಜಾನೆ ಮುಮ್ತಾಜ್ ಅಲಿ ನದಿಗೆ ಹಾರಿರುವ ಮಾಹಿತಿ ಬಂದಿತ್ತು. ಬೆಳಿಗ್ಗೆ 10 ಗಂಟೆಗೆ ಮುಮ್ತಾಜ್ ಅಲಿ ಮೃತದೇಹ ಸಿಕ್ಕಿದೆ.ಮುಮ್ತಾಜ್ ಅಲಿ ಸಹೋದರ ಕಾವೂರು ಠಾಣೆಗೆ ದೂರು ನೀಡಿದ್ದಾರೆ.ಹನಿ ಟ್ರ್ಯಾಪ್ ಮಾಡಿದ್ದಾರೆಂದು ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಮೂರು ತಿಂಗಳಿನಿಂದ ಖಿನ್ನತೆಯಲ್ಲಿ ಇರುವುದರ ಬಗ್ಗೆ ಉಲ್ಲೇಖಿಸಲಾಗಿದೆ. ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸೆಕ್ಸ್ ವೀಡಿಯೊ ಆಧಾರದಲ್ಲಿ ಮುಮ್ತಾಜ್ ಗೆ ಬೆದರಿಕೆ ಹಾಕಿದ ಬಗ್ಗೆ ದೂರು ಸಲ್ಲಿಕೆಯಾಗಿದೆ.

Leave a Reply