August 30, 2025
WhatsApp Image 2024-10-22 at 5.14.14 PM

ಸಜಿಪ ಮೂಡ ಗ್ರಾಮದ ನಗ್ರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಲಾನ್ಸಿ ಪಿರೇರಾ ಇವರ ನಿಧನಕ್ಕೆ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಬಶೀರ್ ಬೊಳ್ಳಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನನ್ನನ್ನು ಸೇರಿಸಿ ಸಾವಿರಾರು ವಿದ್ಯಾರ್ಥಿ ವೃಂದವನ್ನು ಸಮಾಜಕ್ಕೆ ಅರ್ಪಿಸಿದ ನಮ್ಮ ನೆಚ್ಚಿನ ಶಿಕ್ಷಕರಲ್ಲಿ ಒಬ್ಬರಾಗಿದ್ದು, ಸೌಮ್ಯ ಸ್ವಭಾವದಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದು, ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಮೇರು ವ್ಯಕ್ತಿತ್ವದ ಮುಖ್ಯೋಪಾಧ್ಯಾಯರಾದ ಲಾನ್ಸಿ ಪಿರೇರಾ ಅವರ ಅಗಲಿಕೆಯು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಕುಟುಂಬ, ಬಂದು-ಬಳಗ ಹಾಗೂ ಅವರ ಶಿಷ್ಯ ವೃಂದಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಬಶೀರ್ ಬೊಳ್ಳಾಯಿ ಸಂತಾಪದಲ್ಲಿ ತಿಳಿಸಿದ್ದಾರೆ.

About The Author

Leave a Reply