ಮಂಗಳೂರು: ಜೈನ ಮಂದಿರದಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆ ಹಿಂಬದಿಯಲ್ಲಿರುವ ಗುಜರಾತಿ ಸಮುದಾಯದ ಶ್ವೇತಾಂಬರ ಮೂರ್ತಿ ಪೂಜಕ್ ಜೈನ ಮಂದಿರದಿಂದ 5 ಮೂರ್ತಿಗಳಿಗೆ ಹಾಕಿದ್ದ 55 ಗ್ರಾಂ ತೂಕದ ಐದು ಚಿನ್ನದ ಸರಗಳು ಕಳವಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅ.23ರಂದು ಮುಂಜಾವ 4:30ಕ್ಕೆ ಬಂದ ಮಾಹಿತಿಯಂತೆ ಜೈನ ಮಂದಿರಕ್ಕೆ ಹೋಗಲು ಮನೆಯಿಂದ ಹೊರಬಂದಾಗ ರಸ್ತೆ ಬದಿ ಹಣದ ಡಬ್ಬಿಯನ್ನು ಒಡೆಯುವ ಶಬ್ದ ಕೇಳಿ ಬಂತು. ಅಲ್ಲಿಗೆ ಹೋದಾಗ ಹಣದ ಡಬ್ಬವನ್ನು ಬಿಟ್ಟು ಓರ್ವ ಪರಾರಿಯಾದ. ಬಳಿಕ ಹಣದ ಡಬ್ಬದೊಂದಿಗೆ ಜೈನ ಮಂದಿರಕ್ಕೆ ಹೋಗಿ ನೋಡಿದಾಗ ಬಾಗಿಲಿನ ಚಿಲಕವನ್ನು ಮುರಿದು ಅಂದಾಜು 2,50,000. ರೂ. ಮೌಲ್ಯದ ಚೈನುಗಳು ಕಳವಾಗಿವೆ ಎಂದು ಜೈನ ಮಂದಿರದ ಅರ್ಚಕ ದೂರಿನಲ್ಲಿ ತಿಳಿಸಿದ್ದಾರೆ.

Leave a Reply