November 8, 2025
DK SHIVAKUMAR

ಮಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರ ಅಳು ಎಲ್ಲಾ ಬರೋದೇ ಎಲೆಕ್ಷನ್ ಟೈಮ್‌ನಲ್ಲಿ ಎಂದು ಡಿಕೆ ಶಿವಕುಮಾರ್ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ತೋರಿಸು. ಕೆರೆ ಮಾಡಿದ್ದು ಯೋಗೇಶ್ವರ್, ದುಡ್ಡು ಕೊಟ್ಟಿದ್ದು ನಾನು. ನೀನು ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಿಲ್ಲ. ಎಂಎಲ್‌ಎ ಆಗಿದ್ದಾಗ ಬಿಜೆಪಿ ಜೊತೆಗೆ ಸಂಪರ್ಕ ಇತ್ತು. ಗುರುತು ಮಾಡೋ ಕೆಲಸ ಮಾಡಬೇಕಿತ್ತಲ್ಲ. ಸುಮ್ಮನೆ ವೋಟಿಗೋಸ್ಕರ ಬಂದು ಮಾತನಾಡೋದಲ್ಲ. ಅಭ್ಯರ್ಥಿಗೆ ಲಾಸ್ ಏನೂ ಆಗಿಲ್ಲ, ಅಭ್ಯರ್ಥಿಗೂ ಚನ್ನಪಟ್ಟಣಕ್ಕೂ ಸಂಬಂಧ ಇಲ್ಲ. ಅವರು ಸೋತಿದ್ದು ಮಂಡ್ಯ ಹಾಗೂ ರಾಮನಗರದಲ್ಲಿ. ನೀನು, ನಿನ್ನ ಧರ್ಮಪತ್ನಿ ಇದ್ದರೂ ಇಲ್ಲಿಗೆ ನೀನು ಏನು ಕೊಟ್ಟೆ? ಚನ್ನಪಟ್ಟಣಕ್ಕೆ ನೀನು ಏನು ಕೊಟ್ಟೆ ಎಂದು ಹೇಳಬೇಕು ಎಂದು ಏಕವಚನದಲ್ಲೇ ಹೆಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

ಮಿಸ್ಟರ್ ಕುಮಾರಸ್ವಾಮಿ, ನಿಮ್ಮ ಅವಧಿಯಲ್ಲಿ ರಾಷ್ಟ್ರಧ್ವಜ ಹಾರಿಸೋಕೆ ಒಂದು ದಿನವೂ ರಾಮನಗರಕ್ಕೆ ಹೋಗಿಲ್ಲ. ಚನ್ನಪಟ್ಟಣಕ್ಕೂ ಹೋಗಿಲ್ಲ. ಕನ್ನಡ ಬಾವುಟ ಹಾರಿಸಲು ಸಂವಿಧಾನದ ವ್ಯವಸ್ಥೆಯಲ್ಲಿ ನಿನ್ನನ್ನು ರಾಮನಗರ, ಚನ್ನಪಟ್ಟಣದ ಜನ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು. ಒಂದು ದಿನವೂ ಹೋಗಿ ನೀನು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಯೋಗೇಶ್ವರ್ ಪಕ್ಷಾಂತರಿ ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿ ಎಲ್ಲಾ ಕಡೆನೂ ಹೋದರು. ಎನ್‌ಡಿಎ ಸರಿ ಇಲ್ಲ, ಕುಮಾರಸ್ವಾಮಿ ಸರಿ ಇಲ್ಲ ಎಂದು ಎಂಎಲ್‌ಸಿ ಸ್ಥಾನ ಬಿಟ್ಟು ನಮ್ಮ ಜೊತೆ ಬಂದಿದ್ದಾರೆ. ಅವರು ಟಿಕೆಟ್ ಕೊಡುತ್ತೇನೆ ಅಂತ ಹೇಳಿದ್ರೋ ಬಿಡ್ತೀನಿ ಅಂದ್ರೋ ನನಗೆ ಗೊತ್ತಿಲ್ಲ. ನಾನಿವತ್ತು ಚನ್ನಪಟ್ಟಣ ತಾಲೂಕಿಗೆ ವಿದ್ಯಾವಂತ, ಬುದ್ದಿವಂತನ ಆಯ್ಕೆ ಮಾಡಿ ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ನಿಮ್ಮ ಸೇವೆ ಮಾಡುತ್ತೇವೆ. ನೂರಾರು ಕೋಟಿ ರೂ. ಕೆಲಸ ಆಗಲೇ ಶುರು ಮಾಡಿದ್ದೇವೆ. ಸಾವಿರಾರು ಜನ ಬಡವರು ಬಂದು ಅರ್ಜಿ ಕೊಟ್ಟಿದ್ದಾರೆ, ಅವರಿಗೆ ಸ್ಪಂದಿಸುತ್ತೇವೆ. ಜನತಾದಳಕ್ಕೆ ಯಾವುದೇ ಭವಿಷ್ಯ ಇಲ್ಲ, ಭವಿಷ್ಯ ಇರೋ ನಾವು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

About The Author

Leave a Reply