October 26, 2025
WhatsApp Image 2024-11-06 at 9.17.22 AM

ಬೆಳ್ತಂಗಡಿ : ವಿಷ ಸೇವನೆ ಮಾಡಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವಿಗೆ ಶರಣಾದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ.

ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲ್  ಡಿಸೋಜ  ಮತ್ತು  ಗ್ರೇಸಿ ಡಿಸೋಜ ದಂಪತಿ ಪುತ್ರಿ ಪ್ರಿಯಾಂಕಾ ಡಿ’ಸೋಜ(19)  ಆತ್ಮಹತ್ಯೆ ಮಾಡಿಕೊಂಡ ತಯವತಿಯಾಗಿದ್ದಾಳೆ.   ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಪ್ರಿಯಾಂಕ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಪ್ರಿಯಾಂಕ  ಅವರನ್ನು ಮಮಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದ್ರೆ ಇಂದು ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್  ಜಿಲ್ಲಾಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾಳೆ.  ವಿಷ ಪದಾರ್ಥ ಸೇವಿಸಲು ಕಾರಣವೇನೆಂದು  ಇನ್ನೂ ಸ್ಪಷ್ಟವಾಗಿಲ್ಲ. ಮೃತ ಪ್ರಿಯಾಂಕ  ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ಕಲಿಗೆಯ ವಿದ್ಯಾರ್ಥಿನಿಯಾಗಿದ್ದರು. ಮೃತಳ ಸಹೋದರಿ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಪ್ರಿಯಾಂಕ ಸಾವಿನ ಹಿನ್ನೆಯಲ್ಲಿಂದು  ಕಾಲೇಜಿಗೆ ರಜೆ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

About The Author

Leave a Reply