
ಕಾಸರಗೋಡು: ಪ್ರಸಿದ್ಧ ಶಂಕರಾಚಾರ್ಯ ಪರಂಪರೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ವಾಹನದಲ್ಲಿರುವ ಸಂದರ್ಭದಲ್ಲಿ ನಡೆದಿರುವ ದಾಳಿ ಅತ್ಯಂತ ಖಂಡನೀಯ.
ಜಾತಿ ಮತವೆನ್ನದೆ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ, ಕಲೆ ಸಾಹಿತ್ಯ ಸಾಮಾಜಿಕ ಚಟುವಟಿಕೆಗಳಿಗೆ ಅಗತ್ಯ ಪ್ರಾಶಸ್ತ್ಯ ನೀಡಿ ಸಮಾಜಕ್ಕೋಸ್ಕರ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟಿರುವ ಸ್ವಾಮೀಜಿಯವರ ಮೇಲಿನ ದಾಳಿಯನ್ನು ಖಂಡಿಸುತ್ತಾ ಇದರ ಕುರಿತು ಉನ್ನತ ಮಟ್ಟದ ತನಿಖೆ ಮಾಡಬೇಕು ಹಾಗೂ ಸ್ವಾಮೀಜಿಗೆ ಹೆಚ್ಚಿನ ಭದ್ರತೆಯನ್ನು ಸರಕಾರ ನೀಡಬೇಕು.



ಸ್ವಾಮೀಜಿಯವರು ವಾಹನದಲ್ಲಿರುವ ಸಂದರ್ಭದಲ್ಲಿ ಆಗಿರುವ ದಾಳಿಯಾದ್ದರಿಂದ ಕೇರಳ ಸರಕಾರ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ನ್ಯಾಯವಾದಿ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುಡಿಪು ಬಲವಾಗಿ ಆಗ್ರಹಿಸಿದ್ದಾರೆ.