
ನೆಲ್ಯಾಡಿ: ಜಾಗದ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳ ಕೃಷಿಕರೋರ್ವರ ಕೊಲೆಯೊಂದಿಗೆ ಅಂತ್ಯ ಕಂಡ ಘಟನೆ ಗೋಳಿತೊಟ್ಟು ಸಮೀಪದ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.



ಪೆರ್ಲ ನಿವಾಸಿಯಾಗಿದ್ದ ಪ್ರಗತಿಪರ ಕೃಷಿಕ ರಮೇಶ ಗೌಡ(51ವ.) ಕೊಲೆಯಾದವರು. ಸಮೀಪದ ಸಂಬಂಧಿ ಹರೀಶ್ ಎಂಬಾತ ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ವರದಿಯಾಗಿದೆ.
ನ.8ರಂದು ರಾತ್ರಿ 7ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.