
ಪುತ್ತೂರು,: ಪುತ್ತೂರು ತಾಲೂಕಿನ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಬಸ್ಸು ನಿಲ್ದಾಣದಲ್ಲಿ ಯಾರೋ ಕಿಡಿಗೇಡಿಗಳು ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದು ಇದರ ವಿರುದ್ಧ SDPI ನೆಟ್ಟಣಿಗೆ ಮೂಡ್ನೂರ್ ಬ್ರಾಂಚ್ ಅಧ್ಯಕ್ಷರಾದ ಪಾರೂಕ್ ಟಿ.ಎ ರವರು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.



ಪೋಸ್ಟರ್ ಅಂಟಿಸಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದರು.