October 13, 2025
WhatsApp Image 2024-11-17 at 5.57.32 PM

ಅಡ್ಡೂರು-ಪೊಳಲಿ ಸೇತುವೆಯ ಧಾರಾಳವಾಗಿ ಸಾಮಾರ್ಥ್ಯ ಹೆಚ್ಚಿಸುವ ಬಗ್ಗೆ ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯ  ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ನ. 16 ಶನಿವಾರ ನಡೆದ ಸಭೆಗೆ ಹಾಜರಾಗಿ ಸಹಕಾರ ನೀಡಿ ಕೈ ಜೋಡಿಸಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿಯವರು ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾಯಕ್ ಇವರ ಉಪಸ್ಥಿತಿ ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಸಭೆ ನಡೆದ ನಂತರ ಉಸ್ತುವಾರಿ ಸಚಿವರ ಕಚೇರಿ ಗೆ ಭೇಟಿ ನೀಡಿದ ಪ್ರಜಾ ಜ್ಯೋತಿ ಪ್ರತಿಷ್ಠಾನ ಸಂಘಟನೆ ಯ ನೀಯೊಗ ಸೇತುವೆಯ ಪರ್ಯಾಯ ವ್ಯವಸ್ಥೆ ಗೆ ಕೂಡಲೆ ಕೈಗೊಳ್ಳಲು ಮನವಿ ಸಲ್ಲಿಸಿದರು. ಸಭೆಯಲ್ಲಿ ನಡೆದ ವಿಷಯ ಸ್ಪಷ್ಟವಾಗಿ ವಿವರಿಸಿ ವ್ಯವಸ್ಥೆ ಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ನಮ್ಮ ಪ್ರಜಾ ಜ್ಯೋತಿ ಪ್ರತಿಷ್ಠಾನ ದ ಉಪಾಧ್ಯಕ್ಷೆ ಶ್ರೀ ವಿನ್ನಿ ಪಿಂಟೋ ಆವರು ವೇಲೆನ್ಸಿಯಾ ಸೂಟರ್ ಪೇಟೆ ರಸ್ತೆ ಹಾಳಾಗಿ ವಾಹನ ಸಂಚಾರ ಹದಗೆಟ್ಟಿದೆ ಎಂದು ಸಚಿವರ ಗಮನಕ್ಕೆ ತಂದರು ತಕ್ಷಣ ಸ್ಪಂದನೆ ದೊಂದಿಗೆ ನಿಯೊಗ ಜೊತೆ ಸಹಕಾರ ನೀಡಿದ್ದ ಮಾನ್ಯ ಸಚಿವರಿಗೆ ಧನ್ಯವಾದ ಹೇಳಿದರು. ಪ್ರಜಾ ಜ್ಯೋತಿ ಪ್ರತಿಷ್ಠಾನ ಸಂಘಟನೆಯ ಸಮಿತಿ ಅಧ್ಯಕ್ಷರು ಶ್ರೀ ರೋಶನ್ ಲೋಬೊ ಪಡು ಪೆರಾರ,
ಪದಾಧಿಕಾರಿಗಳಾದ ಶ್ರೀಮತಿ ವಿನ್ನಿ ಪಿಂಟೋ ವೇಲೆನ್ಸಿಯ, ಶ್ರೀ ಅಬ್ದುಲ್ ಖಾದರ್ ಅಡ್ಡೂರು, ಶ್ರೀ ಮಹಮ್ಮದ್ ಸಾಲಿ ಅಡ್ಡೂರು ಉಪಸ್ಥಿತರಿದ್ದರು.

About The Author

Leave a Reply