August 30, 2025
WhatsApp Image 2024-11-18 at 11.19.49 AM

ಕಾಸರಗೋಡು: ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.  ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಮೃತಪಟ್ಟ ಬಾಲಕನಾಗಿದ್ದಾನೆ.

ಚೆಂಗಳ ಥೈವಲಪ್ಪು ನಿವಾಸಿ, ದುಬೈನ ಬಟ್ಟೆ ವ್ಯಾಪಾರಿ ಎ.ಪಿ.ಅಶ್ರಫ್ ಮತ್ತು ನಸೀಮಾ ದಂಪತಿಯ ಪುತ್ರ ನಾಗಿದ್ದ ಮಫಾಝ್  ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಮನ್ಸಾರ್ (Al Mansar Beach) ಬೀಚ್ ಗೆ ತೆರಳಿದ್ದ ವೇಳೆ  ದುರ್ಘನೆ ನಡೆದಿದೆ ಎನ್ನಲಾಗಿದೆ.ರಜಾದಿನವಾದ ಶುಕ್ರವಾರ ಮಫಾಸ್ ತನ್ನ ಕುಟುಂಬದೊಂದಿಗೆ ಮನ್ಸರ್ ಬೀಚ್ ಗೆ ಬಂದಿದ್ದರು. ಚೆಂಡಿನೊಂದಿಗೆ ಆಡುವಾಗ ಚೆಂಡು ಸಮುದ್ರಕ್ಕೆ ಬಿದ್ದಾಗ, ಅವನು ಅದನ್ನು ತೆಗೆದುಕೊಳ್ಳಲು ಹೋಗಿ ಇದ್ದಕ್ಕಿದ್ದಂತೆ  ಕಡಲಿನ ಸೆರೆಗೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ. ಘಟನೆಯ ನಂತರ, ಅಧಿಕಾರಿಗಳು ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಹಲವು ಗಂಟೆಗಳ ಶೋಧದ ನಂತರ ಅಪಘಾತ ಸಂಭವಿಸಿದ ಸ್ಥಳದಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ.ಅನಿರೀಕ್ಷಿತ ಘಟನೆಯಿಂದ ಮಫಾಝ್ ಕುಟುಂಬ, ಸ್ನೇಹಿತರು ಮತ್ತು ಆತ್ಮೀಯರ ಆಕ್ರಂದನ ಮುಗಿಲು ಮುಟ್ಟಿದೆ. .

About The Author

Leave a Reply