ಉಡುಪಿ: ರೈಲು ಪ್ರಯಾಣಿಕನೊಬ್ಬನ 63 ಲಕ್ಷ ಮೌಲ್ಯ ಚಿನ್ನಾಭರಣ ಕಳವು

ಉಡುಪಿ :  ಸಿ,ಎಸ್,ಟಿ ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ (ರೈಲು ನಂ. 12133, ಕೋಚ್ ನಂ. ಎಸ್ 3) ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಮುಂಬೈನ ಅವಿನಾಶ್ ಎಂಬ ಪ್ರಯಾಣಿಕರೋರ್ವರ ಸೂಟ್‌ಕೇಸ್‌ನಿಂದ ಚಿನ್ನಭರಣ ಕಳ್ಳತನ ಮಾಡಿರುವ ಪ್ರಕರಣ ನವೆಂಬರ್ 15 ರಂದು ವರದಿಯಾಗಿದೆ.

ದೂರಿನ ಪ್ರಕಾರ, ಅವಿನಾಶ್ ಅವರು ತಮ್ಮ ಸೀಟಿನ ಕೆಳಗೆ ಸುಮಾರು 63 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಮತ್ತು ಚಿನ್ನಾಭರಣಗಳನ್ನು ಒಳಗೊಂಡ ನಾಲ್ಕು ಸೂಟ್‌ಕೇಸ್‌ಗಳನ್ನು ಝಿಪ್ಪರ್ ಲಾಕ್‌ಗಳಿಂದ ಭದ್ರಪಡಿಸಿದ್ದರು. ನವೆಂಬರ್ 16 ರಂದು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕುಟುಂಬ ಸಮೇತರಾಗಿನ ಇಳಿದಿದ್ದು, ಸಂಜೆ ಮನೆಯಲ್ಲಿ ಬ್ಯಾಗ್‌ಗಳನ್ನು ತೆರೆದಾಗ ಎರಡು ಬ್ಯಾಗ್‌ಗಳಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದೆ. ಪನ್ವೇಲ್ ಮತ್ತು ಕಂಕಾವಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೂರಿನ ಆಧಾರದ ಮೇಲೆ ಮಣಿಪಾಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply