ಮೈಸೂರು : ಭಾರತವು ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ದೇಶವಾಗಿದೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ರಾಷ್ಟ್ರವಾಗಿಸಲು ಯತ್ನಿಸುತ್ತಿದ್ದಾರೆ. ಅದನ್ನು ನಾವು ವಿರೋಧಿಸಬೇಕು. ಅಂಬೇಡ್ಕರ್ ಸಂವಿಧಾನ ಇರುವವರೆಗೂ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ.
ಅದಕ್ಕೆ ನಾವು ಬಿಡಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಮೈಸೂರಿನಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ರಾಷ್ತ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವನ್ನ ಒಂದೇ ಧರ್ಮದ ರಾಷ್ಟ್ರವಾಗಿಸುವ ಯತ್ನ ನಡೆಯುತ್ತಿದೆ. ನಾವುಗಳು ಈ ರೀತಿ ಆಗಲು ಬಿಡಬಾರದು ಎನ್ನುವ ಮೂಲಕ ಹಿಂದೂ ರಾಷ್ಟ್ರ ಕಲ್ಪನೆಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ನಾವು ನೆಮ್ಮದಿಯಾಗಿರಬೇಕೆಂದರೆ ಸಂವಿಧಾನವನ್ನ ನಾವು ರಕ್ಷಣೆ ಮಾಡಬೇಕು. ಭಾರತದ ದೇಶ ವಿವಿಧತೆಯಲ್ಲಿ ಏಕೆತೆಯನ್ನ ಸಾರುವ ದೇಶವಾಗಿದೆ. ಇಲ್ಲಿ ಹಲವು ಜಾತಿ ಧರ್ಮಗಳು ಸಾಮರಸ್ಯದಿಂದ ಬಾಳುತ್ತಿವೆ. ಇದೇ ಭಾರತ ದೇಶದ ಶಕ್ತಿ ಕೂಡ ಆಗಿದೆ. ಎಲ್ಲಿಯ ತನಕ ನಮ್ಮ ದೇಶದಲ್ಲಿ ವೈವಿದ್ಯತೆ ಇರುತ್ತೆ, ಎಲ್ಲಾ ಸಮುದಾಯಗಳು ಶಾಂತಿ ಸಂತೋಷದಿಂದ ಇರುಲು ಸಾಧ್ಯವಾಗುತ್ತೆ, ಅಲ್ಲಿಯವರೆಗೆ ಭಾರತ ದೇಶ ಮುಂದುವರೆಯಲು ಸಾಧ್ಯ ಎಂದರು.
ದೇಶದ ಸಂವಿಧಾನ ಬಹಳ ಗಟ್ಟಿಯಾಗಿದೆ. ಕೆಲವು ಜನ ಮಾತ್ರ ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ. ಬಹುಸಂಖ್ಯಾತರು ಸೌಹರ್ದತೆ, ಸೋದರರಂತೆ ಬಾಳಬೇಕೆಂದು ಬಯಸುತ್ತಿದ್ದಾರೆ. ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಹೊರಟಿರುವುದು ಬಹಳ ಅಪಾಯಕಾರಿ. ಇದಕ್ಕೆ ನಾವು ಯಾರೂ ಸಹ ಬಿಡಬಾರದು. ಆದಾಗ್ಯೂ ನಾವು ಯಾರು ಸಹ ಧೃತಿಗೆಡಬಾರದು ಎಂದರು.