ಮಂಗಳೂರು : ಕಾರು ಡಿಕ್ಕಿ ಹೊಡೆದು ಮಹಿಳೆ ಮೃತ್ಯು..!

ಮಂಗಳೂರು: ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಪದವಿನಂಗಡಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಜಯಶೀಲ (77) ಎಂದು ಗುರುತಿಸಲಾಗಿದೆ.

ದೊರೆತ ಮಾಹಿತಿ ಪ್ರಕಾರ ಜಯಶೀಲ ಅವರು ರಸ್ತೆಬದಿ ನಿಂತಿದ್ದಾಗ ಕಾರು ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರು ಏಕಾಏಕೀ ಬಂದು ಮುಂದೆ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು, ಆ ಕಾರು ಮತ್ತೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತವೂ ಸಂಭವಿಸಿದೆ.

ವ್ಯಕ್ತಿಯೋರ್ವ ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಏಕಾಏಕಿ ಮುಂದೆ ಸಾಗಿದ ಕಾರು ನಿಲ್ಲಿಸಿದ್ದ ಕಾರು, ಆಟೋಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿ ಮಹಿಳೆಯ ಮೇಲೆ ಕಾರು ಎಗರಿ ಈ ಅಪಘಾತ ಸಂಭವಿಸಿದೆ. ಚಾಲಕನ ಬೇಜವಬ್ದಾರಿ ಚಾಲನೆ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

Leave a Reply