
ಪುತ್ತೂರು: ಪುತ್ತೂರು ನಗರದ ಪ್ರಮುಖ ರಸ್ತೆಗಳೆಲ್ಲವು ಕಳೆದ ಮಳೆಗಾಲದಿಂದ ಬಹಳಷ್ಟು ಹೊಂಡ ಗುಂಡಿಗಳಿಂದ ತುಂಬಿ ಮುಖ್ಯ ರಸ್ತೆಗಳೆಲ್ಲವೂ ತೀರಾ ಹದೆಗೆಟ್ಟು ಹೋಗಿದ್ದವು ಕಳೆದ ಮಳೆಗಾಲದಲ್ಲಿ ಸಂಪೂರ್ಣವಾಗಿ ಹೊಂಡ ಗುಂಡಿಯಾಗಿ ಮಾರ್ಪಟ್ಟ ಪುತ್ತೂರಿನ ಮುಖ್ಯ ರಸ್ತೆಗಳಿಗೆ ಹಲವು ಬಾರಿ ತಾತ್ಕಾಲಿಕ ತೇಪೆ ಕಾರ್ಯ ಮಾಡಿದರು ಕೂಡ ಅದು ಅಷ್ಟೇ ಬೇಗ ಎದ್ದು ಹೋಗುತ್ತಿತ್ತು ಇದೀಗ ಮಳೆ ನಿಂತು ತಿಂಗಳು ಕಳೆದರೂ ರಸ್ತೆಗಳಲ್ಲಿ ವಾಹನ ಸವಾರರು ಪ್ರಯಾಣಿಸಲು ಹರಸಾಹಸ ಪಡುತ್ತಿದ್ದರು.



ನಮ್ಮ ಪುತ್ತೂರು ಶಾಸಕರಿಗೆ ನಮ್ಮ ಮಾಧ್ಯಮದ ಮೂಲಕ ಕೆಲವು ದಿನಗಳ ಹಿಂದೆ ಮನವಿ ಮಾಡಲಾಗಿತ್ತು ತಕ್ಷಣ ಸ್ಪಂದಿಸಿ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಪುತ್ತೂರಿನ ಎಲ್ಲಾ ರಸ್ತೆಗಳಿಗೆ ಮರು ಡಾಮರೀಕರಣ ಹಾಗೂ ಪ್ಯಾಚ್ ವರ್ಕ್ ಕಾಮಗಾರಿ ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು.. ಏನೇ ಹೇಳಿದರೂ ಪುತ್ತೂರು ಶಾಸಕರು ಬಹಳಷ್ಟು ತಕ್ಷಣ ಸ್ಪಂದಿಸಿ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವುದು ಹಾಗೂ ಅವರ ಕಾರ್ಯ ವೈಖರಿಯನ್ನು ಪುತ್ತೂರಿನ ನಾಗರಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ..ಇಂತಹ ಶಾಸಕರನ್ನು ಪಡೆದ ಪುತ್ತೂರಿನ ಜನತೆ ಧನ್ಯರು