November 8, 2025
WhatsApp Image 2024-12-02 at 9.23.52 AM

ಮಂಗಳೂರು: ರಸ್ತೆ ಸಂಚಾರದ ವೇಳೆ ಅಡ್ಡ ಬಂದಿದೆ ಎಂದು ಸ್ಕೂಟರ್ ಸವಾರನೋರ್ವನು ಹೆಲ್ಮೆಟ್‌ನಲ್ಲಿ ಬಡಿದು ಕೆಎಸ್ಆರ್‌ಟಿಸಿ ಬಸ್‌ನ ಮುಂಭಾಗದ ಗಾಜು ಒಡೆದು ಬೈಕ್ ಸವಾರನೋರ್ವನು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ರವಿವಾರ ಸಂಜೆ 7.30ರ ಸುಮಾರಿಗೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಎಂಬಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ KSRTC ಬಸ್ಸು ಸಂಚಾರ ಮಾಡುತ್ತಿತ್ತು. ಈ ವೇಳೆ ಸ್ಕೂಟರೊಂದು ಅಡ್ಡ ಬಂದಿದೆ.

ಆಗ ಬಸ್ ಚಾಲಕ ಅರುಣ್ ಅಡ್ಡ ಬಂದ ಸ್ಕೂಟರ್ ಸವಾರನನ್ನು ಪ್ರಶ್ನಿಸಿದ್ದಾರೆ‌. ಇದರಿಂದ ಕೋಪಗೊಂಡ ಸ್ಕೂಟರ್ ಸವಾರ ಸಂಚಾರದಲ್ಲಿದ್ದ ಬಸ್ಸನ್ನು ಅಡ್ಡಗಟ್ಟಿ ಹೆಲ್ಮೆಟ್‌ನಿಂದ ಬಸ್ಸಿನ ಮುಂಭಾಗದ ಗಾಜನ್ನು ಒಡೆದು ಪರಾರಿಯಾಗಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಂಕನಾಡಿ ಪೊಲೀಸರು ಬಸ್ ಚಾಲಕ ಅರುಣ್‌ರನ್ನು ವಿಚಾರಿಸಿ, ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಿದ್ದಾರೆ.

ಬಸ್‌ ಚಾಲಕ ಅರುಣ್ ನೀಡಿರುವ ದೂರಿನಂತೆ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಆರೋಪಿ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

About The Author

Leave a Reply