
ಉಡುಪಿಯಿಂದ ಹೆಜಮಾಡಿ ಟೋಲ್‌ಗೇಟ್‌ನತ್ತ ಬಂದಿದ್ದ ಎಸ್‌ಡಿಪಿಐ ನಾಯಕ ರಿಯಾಜ್ ಕಡುಂಬು ಹಾಗೂ ಮತ್ತಿತರರು ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಅವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಈ ಜಾಥಾವನ್ನು “ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 2′ ಎಂಬುದಾಗಿ ಸಂಘಟಿಸಲಾಗಿತ್ತು.
ಈ ಕುರಿತಾದ ಅನುಮತಿಯನ್ನು ಪಡೆಯಲಾಗಿದೆಯೇ ಎಂದು ಹೆಜಮಾಡಿಗೆ ಆಗಮಿಸಿದ್ದ ಜಾಥಾದ ನಾಯಕ ರಿಯಾಜ್ ಕಡುಂಬು ಅವರಲ್ಲಿ ಠಾಣೆಯ ಪಿಎಸ್‌ಐ ಪ್ರಸನ್ನ ಪ್ರಶ್ನಿಸಿದ್ದರು. ಆಗ ಅನುಮತಿ ಪಡೆದಿಲ್ಲ ಎನ್ನುವುದನ್ನು ಎಸ್‌ಡಿಪಿಐ ನಾಯಕರು ಪೊಲೀಸರಿಗೆ ತಿಳಿಸಿದ್ದರು. ಅನುಮತಿ ಇಲ್ಲದ ಜಾಥಾದಲ್ಲಿ ಕಾರು ಬೈಕ್‌ಗಳಲ್ಲಿನ 75 – 100 ಜನರ ಅಕ್ರಮ ಗುಂಪು ಹೆದ್ದಾರಿ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ. ಇದು ಸರಿಯಲ್ಲ ಎಂದು ಪ್ರಸನ್ನ ಅವರು ವಿವರಿಸಿದ್ದರು ಎಂದು ತಿಳಿಸಲಾಗಿದೆ.
ಕಿವಿಗೊಡದೆ ಘೋಷಣೆ ಕೂಗುತ್ತಾ ಮೂಲ್ಕಿಯತ್ತ ಜಾಥಾವನ್ನು ಮುಂದುವರಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.