ಚಲಿಸುತ್ತಿದ್ದ ಟೂರಿಸ್ಟ್ ಟಿಟಿ ವಾಹನಕ್ಕೆ ದಿಢೀರ್ ಬೆಂಕಿ..!!

ಉಡುಪಿ: ಚಲಿಸುತ್ತಿದ್ದ ಟೂರಿಸ್ಟ್ ಟಿಟಿ ವಾಹನಕ್ಕೆ ಕುದುರೆಮುಖದಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಭವಿಸಿದೆ.

ಉಡುಪಿಯ ಕಟಪಾಡಿಯಿಂದ ಕಳಸದ ಕಡೆಗೆ ಸಾಗುತ್ತಿದ್ದ ಟೂರಿಸ್ಟ್ ಟಿಟಿ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವಾಹನದಲ್ಲಿದ್ದ ಹನ್ನೊಂದು ಮಂದಿ ಪ್ರಯಾಣಿಕರು ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ವಾಹನದ ತುಂಬಾ ವ್ಯಾಪಿಸಿದೆ‌.‌ಕೆಲವೇ ಕ್ಷಣದಲ್ಲಿ ಬೆಂಕಿ ಇಡೀ ವಾಹನಕ್ಕೆ ಆವರಿಸಿ ವಾಹನ‌ ಸಂಪೂರ್ಣ ಸುಟ್ಟು ಹೋಗಿದೆ‌‌. ವಯರ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು, ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ, ಎಂದು ತಿಳಿದುಬಂದಿದೆ.

Leave a Reply