ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾರ್ಶ ಮೈದಾನ ಹಾಗೂ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇದರ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಜಂಟಿ ಆಶ್ರಯದಲ್ಲಿ,ಎ.ಜೆ.ಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ,ಸಮಾಜಸೇವಕರಾದ ಹಳೆವಿದ್ಯರ್ಥಿ ಹಸೈನಾರ್ ತಾಳಿತ್ತನೂಜಿ ಅವರ ಸಹಕಾರದೊಂದಿಗೆ ಉಚಿತ ದಂತ ತಪಾಸಣೆಯೊಂದಿಗೆ ಚಿಕಿತ್ಸಾ ಶಿಬಿರವು ಇಂದು ಸರಕಾರಿ ಸಮೂಹ ಸಂಸ್ಥೆ ನಾರ್ಶ ಮೈದಾನ ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ಕೊಳ್ನಾಡು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮಹಸೈನಾರ್ ಶಿಬಿರದ ಅದ್ಯಕ್ಷತೆ ವಹಿಸಿ ಉದ್ಘಾಟಿಸಿ,ನಂತರ ಮಕ್ಕಳ ಬಾಯಿ ಶುಚಿತ್ವದ ಬಗ್ಗೆ ಮಾತಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.
ನಂತರ ಮಕ್ಕಳಿಗೆ ಎ.ಜೆ. ಡೆಂಟಲ್ ಇನ್ಸ್ ಟ್ಯೂಟ್ ಆಸ್ಪತ್ರೆಯ ಸಿತಾರ ರತನ್, ಪೋಸ್ಟ್ ಗ್ರಾಜ್ಯುಯೇಟ್ ಸ್ಟೂಡೆಂಟ್ ಡಾ.ಮದ್ನ ಶಿಲ್ಪಾ ,ಮಕ್ಕಳಿಗೆ ಹಲ್ಲಿನ ಆರೋಗ್ಯದಿಂದ ಆಗುವ ಅಪಾಯಗಳು ಹಾಗೂ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಬೊಳಂತೂರುಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಯಾಕೂಬ್ ದಂಡೆಮಾರ್,ಕೊಳ್ನಾಡು ಗ್ರಾ.ಪಂಚಾಯತ್ ಮಾಜಿ ಅದ್ಯಕ್ಷರಾದ ನೆಬಿಸಾ ಖಾದರ್,SDMC ನಿಕಟಪೂರ್ವ ಅದ್ಯಕ್ಷರಾದ ಯಾಕೂಬ್ ನಾರ್ಶ,ಮುಖ್ಯೋಪಾಧ್ಯಾಯರಾದ ಕನ್ನಡ ರಾಜ್ಯೋತ್ಸವ ಪುರಸ್ಕೃತ ಗೋಪಾಲಕೃಷ್ಣ ನೇರಳಕಟ್ಟೆ,ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯರಾದ ಶಂಕರ್ ಸಾರ್,ಸಹಶಿಕ್ಷಕಾರದ ಶರತ್ ಸಾರ್,ಶುಭ ಟೀಚರ್ ಸಹಿತ ಶಿಕ್ಷಕ ವೃಂದ,ವೈದ್ಯಕೀಯ ತಂಡ ಉಪಸ್ಥಿತಿತರಿದ್ದರು.ಗೋಪಾಲಕೃಷ್ಣ ನೇರಳಕಟ್ಟೆ ಸ್ವಾಗತಿಸಿ ಧನ್ಯವಾದ ತಿಳಿಸಿದರು.