ಕೆಮ್ಮಾಯಿ: ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯಾದ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಕೆಮ್ಮಾಯಿ ಇದರ ವಾರ್ಷಿಕ ಮಹಾ ಸಭೆ ಗೌರವಾಧ್ಯಕ್ಷರಾದ ಸಯ್ಯಿದ್ ಅಹಮದ್ ಪೂಕೋಯ ತಂಙಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಹಕೀಂ ಡಿಕೆ ಅವರು ಗತವರ್ಷದ ವರದಿಯನ್ನು ವಾಚಿಸಿ ಮಂಡಿಸಿದರು.
ನಂತರ ನೂತನ ಕಮಿಟಿ ರಚನೆ ಹಾಗು ಜಮಾಅತಿನ ಹಾಗುಹೋಗುಗಳ ಕುರಿತು ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಂಙಲ್ ಅವರು ಮಾತನಾಡಿ, ಅಲ್ಲಾಹನ ಮಸೀದಿಯ ಪರಿಪಾಲನೆಯು ಮುಸ್ಲಿಮರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಪಾರ್ಟಿ ಪಂಗಡ ಎಂಬ ಬೇಧಭಾವ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಿರಿ ಎಂದು ಕರೆನೀಡಿದರು.
ಆಧುನಿಕ ಜಗತ್ತಿನ ಐಶಾರಾಮಿ ಜೀವನಕ್ಕೆ ಬೇಕಾಬಿಟ್ಟಿ ಖರ್ಚುಮಾಡುವ ನಾವುಗಳು ಮಸೀದಿ ಮದ್ರಸ ವಿಚಾರ ಬಂದಾಗ ವಂತಿಗೆ ವಿಚಾರದಲ್ಲಿ ತಕರಾರು ಎತ್ತುತ್ತೇವೆ. ತಿಂಗಳಿಗೆ 500/1000 ಮೊಬೈಲ್, ಚಹಾ ತಿಂಡಿ ಅಂತ ದುಂದು ವೆಚ್ಚ ಮಾಡುವ ನಾವು ಅಲ್ಲಾಹನ ಮಸೀದಿಗೆ 50₹ ಹೆಚ್ಚು ನೀಡಲು ಹಿಂದೇಟು ಹಾಕುವುತ್ತೇವೆ. ಹೀಗೆ ಮಾಡುವುದು ಅಲ್ಲಾಹನನ್ನು ದಿಕ್ಕರಿಸುವುದಕ್ಕೆ ಸಮ ಎಂದು ತಂಙಳ್ ಅವರು ಮಾತಿನ ಚಾಟಿಬೀಸಿದರು.*
ನಂತರ 2024-25ನೇ ಸಾಲಿನ ನೂತನ ಕಮಿಟಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ: ಸಯ್ಯಿದ್ ಅಲ್ ಹಾಜಿ ಅಹಮದ್ ಪೂಕೋಯ ತಂಙಳ್ ಪುತ್ತೂರು
ಅಧ್ಯಕ್ಷರಾಗಿ: ಅಶ್ರಫ್ ಹಾಜಿ ದಾರಂದಕುಕ್ಕು
ಪ್ರಧಾನ ಕಾರ್ಯದರ್ಶಿ: ಹಸನ್ ಹಾಜಿ ಕೊಡಾಜೆ
ಕೋಶಾಧಿಕಾರಿ: ಉಮರ್ ದಾರಂದಕುಕ್ಕು
ಉಪಾಧ್ಯಕ್ಷರಾಗಿ: ಅಬ್ದುಲ್ ಲತೀಫ್ ಹಾಜಿ ಕೆಮ್ಮಾಯಿ
ಜೊತೆ ಕಾರ್ಯದರ್ಶಿ: ಹಕೀಂ ದಾರಂದಕುಕ್ಕು ಹಾಗು 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ನೇಮಿಸಲಾಯಿತು.
ಕಾರ್ಯಕ್ರಮವನ್ನು ಖತೀಬರಾದ ಮುಈನುದ್ದೀನ್ ಮದನಿ ಅವರು ಉದ್ಘಾಟಿಸಿದರು.
ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ