February 14, 2026
WhatsApp Image 2024-12-19 at 2.51.46 PM

ಹಾಸನ: ನಾಟಿ ಕೋಳಿಗೆ ವಿಷವಿಟ್ಟು ಕೊಂದರು ಸತ್ತ ಕೋಳಿಯ ಬಾಯಿಯಲ್ಲಿ ಬೆಂಕಿ ಕಾಣಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ವಿಷ ಸೇವಿಸಿದ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದೆ. ಆದರೆ ಸತ್ತ ಒಂದು ಕೋಳಿಯ ಬಾಯಿಯಲ್ಲಿ ಬೆಂಕಿ ಬರುತ್ತಿದೆ.ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಾದಿಗೆ ಗ್ರಾಮದಲ್ಲಿ ರವಿ ಮತ್ತು ಇತರರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದರ ಜೊತೆಗೆ ಅಲ್ಪಸ್ವಲ್ಪ ಆದಾಯಕ್ಕಾಗಿ ನಾಟಿ ಕೋಳಿಗಳನ್ನು ಸಾಕುತ್ತಿದ್ದರು. ಪ್ರತಿ ದಿನದಂತೆ ನಿನ್ನೆಯು ಕೂಡ ಕಾರ್ಮಿಕರು ಕೋಳಿಗಳನ್ನು ಹೊರಗೆ ಮೇಯಲು ಬಿಟ್ಟು ಕೆಲಸಕ್ಕೆ ಹೋಗಿದ್ದರು.ಆದರೆ ಸಂಜೆ ಕೆಲಸದಿಂದ ಬಂದು ನೋಡಿದಾಗ ಕೋಳಿಗಾಳು ಸಾಮೂಹಿಕವಾಗಿ ಸಾವನ್ನಪ್ಪಿದ್ದು. ಯಾರೋ ನೀಚರು ಕೋಳಿಗಳಿಗೆ ವಿಷ ಹಾಕಿ ಕೊಂದಿದ್ದಾರೆ.

About The Author

Leave a Reply