
ಕಾಸರಗೋಡು: ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಂತೆ ತಿರುವನಂತಪುರ ನೆಯ್ನಾಟಿಂಗರ ಚೆಂಗಲ್ ಸರಕಾರಿ ಯು.ಪಿ. ಶಾಲೆಯ ತರಗತಿ ಕೊಠಡಿಯಲ್ಲಿ 7 ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಡಿದು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.
ಹಾವು ಕಡಿತಕ್ಕೆ ಒಳಗಾದ ವಿದ್ಯಾರ್ಥಿನಿ ನೇಹಾ (12) ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಾವನ್ನು ಶಾಲಾ ಅಧಿಕಾರಿಗಳು ಹೊಡೆದು ಸಾಯಿಸಿದ್ದಾರೆ ಎಂದು ತಿಳಿಯಲಾಗಿದೆ.