ನೀರುಪಾಲಾಗಿದ್ದ ಜಟ್ ಸ್ಕೈ ರೈಡರ್ ಮೃತದೇಹ ಸಮುದ್ರದಲ್ಲಿ ಪತ್ತೆ

ಗಂಗೊಳ್ಳಿ: ತ್ರಾಸಿ ಬೀಚ್ ನಲ್ಲಿ ಪ್ರವಾಸೀ ಜೆಟ್ ಸ್ಕೈ ಮುಳುಗಡೆಯಾಗಿ ಕಣ್ಮರೆಯಾಗಿದ್ದ ಜೆಟ್ ಸ್ಕೈ ರೈಡರ್ ಮೃತದೇಹ ಪತ್ತೆಯಾಗಿದೆ.ಉತ್ತರ ಕನ್ನಡ ಮೂಲದ ರೋಹಿದಾಸ್ ಮೃತದೇಹವು ತ್ರಾಸಿ ಸಮೀಪದ ಹೊಸಪೇಟೆ ರುದ್ರಭೂಮಿ ಹಿಂಬಾಗದ ಸಮುದ್ರತೀರದಲ್ಲಿ ತೇಲಿಬಂದಿದೆ. ಎರಡು ದಿನಗಳ ಹಿಂದೆ ಪ್ರವಾಸಿಗ ಪ್ರಶಾಂತ್ ನನ್ನು ಜೆಟ್ ಸ್ಕೈ ನಲ್ಲಿ ರೋಹಿದಾಸ್ ರೈಡ್ ಗೆ ಕರೆದುಕೊಂಡು ಹೋಗಿದ್ದರು.ಈ ವೇಳೆ ಜೆಟ್ ಮಗುಚಿಬಿದ್ದು ಇಬ್ಬರೂ ನೀರಿಗೆ ಬಿದ್ದಿದ್ದರು. ಆದರೆ ಬೆಂಗಳೂರು ಮೂಲದ ಪ್ರಶಾಂತ್ ನನ್ನ ರಕ್ಷಣೆ ಮಾಡಲಾಗಿತ್ತು. ಬಳಿಕ ರೈಡರ್ ನಾಪತ್ತೆಯಾಗಿದ್ದರು. 36 ಗಂಟೆಗಳ ಬಳಿಕ ರೋಹಿದಾಸ್ ಮೃತದೇಹವನ್ನು ಸ್ಥಳೀಯ ಮೀನುಗಾರರು ಪತ್ತೆ ಹಚ್ಚಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply