August 30, 2025
WhatsApp Image 2024-12-26 at 12.42.19 AM

ಮುಲ್ಕಿ: ಕಿನ್ನಿಗೋಳಿ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರ ಒಗ್ಗೂಡುವಿಕೆಯ 59 ನೇ ಸಾರ್ವಜನಿಕ ಕ್ರಿಸ್ಮಸ್ ಆಚರಣೆ ಪದ್ಮನೂರಿನ ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಮೌಶಿರ್ ಸಾಮನಿಗೆ ರವರು ಸ್ವ ಧರ್ಮವನ್ನು ಅನುಸರಿಸಿ ಸರ್ವ ಧರ್ಮವನ್ನು ಪ್ರೀತಿಸಿ ಗೌರವಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಳು ಸಾಧ್ಯ ಎಂದು ಸಭೀಕರನ್ನಿದ್ದೇಶಿಸಿ ಮಾತನಾಡಿದರು.

ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚರ್ಚ್ ಧರ್ಮ ಗುರುಗಲಕಾದ ವಂ.ಫಾ.ಜೊಕಿಂ ಫರ್ನಾಂಡೀಸ್, ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ ವಿ, ಕೆಮ್ರಾಲ್ ಗ್ರಾಮ ಪಂಚಾಯತ್‌ ಸದಸ್ಯೆ ಮೆಲೀಟಾ ಡಿಸೋಜ, ಶಶಿ ಸುರೇಶ್‌, ಸುನೀತಾ ವಿಶಾಲಾಕ್ಷಿ, ಸರೀತಾ, ಅಬ್ದುಲ್ ಖಾದ‌ರ್ ಮತ್ತಿತರರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್‌ ಉಪನಿರೀಕ್ಷಕ ಮನೋಹರ್, ನಿವೃತ್ತ ಮುಖ್ಯ ಶಿಕ್ಷಕಿ ಲಿನೆಟ್ ಲೋಬೋ ರವರನ್ನು ಗೌರವಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

About The Author

Leave a Reply