January 28, 2026
gas

ಮಂಗಳೂರು: ರಾತ್ರಿ‌ ಮಲಗಿದ್ದ ವೇಳೆ ಸಿಲಿಂಡರ್ ಸ್ಪೋಟಗೊಂಡು ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.

ಮಹದಿಯಾ ಮೃತಪಟ್ಟ ಬಾಲಕಿ. ಡಿಸೆಂಬರ್ 7ರಂದು ರಾತ್ರಿ ಮಂಜನಾಡಿಯ ಖಂಡಿಗದ ತಮ್ಮ ಮನೆಯಲ್ಲಿ ತಾಯಿ ಕುಬ್ರಾ ಮತ್ತು ಮೂವರು ಹೆಣ್ಮಕ್ಕಳಾದ ಮಕ್ಕಳಾದ ಮಹದಿಯಾ,ಮಝಿಯಾ, ಮಾಯಿಝ ಮಲಗಿದ್ದರು. ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದರು‌. ತಕ್ಷಣ ಎಲ್ಲರನ್ನೂ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಪೈಕಿ ತಾಯಿ ಖುಬ್ರಾ ಚಿಕಿತ್ಸೆ ಫಲಿಸದೇ ಡಿಸೆಂಬರ್ 12ರಂದು ಮೃತಪಟ್ಟಿದ್ದರು. ಮಕ್ಕಳಾದ ಮಹದಿಯಾ, ಮಝಿಯಾ, ಮಾಯಿಝಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ‌ ಈ ಪೈಕಿ ಮಹದಿಯಾ ಗುರುವಾರ ಮೃತಪಟ್ಟಿದ್ದಾರೆ. ಮಂಜನಾಡಿಯ ಖಂಡಿಗ ನಿವಾಸಿ ಮುತ್ತಲಿಬ್ ವಿದೇಶದಲ್ಲಿದ್ದರು. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಮಕ್ಕಳು ಮನೆಯಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದರು.

ಮಧ್ಯರಾತ್ರಿ ಮನೆಯೊಳಗಡೆ ಭಾರೀ ಸ್ಪೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಆರ್‌ಸಿಸಿ ಮನೆಯ ಮೇಲ್ಭಾಗದಲ್ಲಿನ ಸಿಮೆಂಟ್ ಶೀಟ್ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ತಾಯಿ ಮಕ್ಕಳು ಮಲಗಿದ್ದ ಕೊಠಡಿ, ಮಂಚ, ಕಿಟಕಿ ಸಂಪೂರ್ಣ ಛಿದ್ರಗೊಂಡು ಸುಟ್ಟು ಕರಕಲಾಗಿತ್ತು. ಶಬ್ದ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ಬೆಂಕಿ ನಂದಿಸಿ, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

About The Author

Leave a Reply