August 30, 2025
DeWatermark.ai_1735446055608

ಕಾಸರಗೋಡು: ನದಿಯಲ್ಲಿ ಸ್ನಾನಕ್ಕಿಳಿದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ಬೋವಿಕ್ಕಾನ ಸಮೀಪದ ಎರಿಂಞಪುಯದಲ್ಲಿ ನಡೆದಿದೆ. ಸಿದ್ದಿಕ್ ರವರ ಪುತ್ರ ರಿಯಾಜ್ (16), ಅಶ್ರಫ್ ರವರ ಪುತ್ರ ಯಾಸಿನ್ (13) ಮತ್ತು ಮಜೀದ್ ರವರ ಪುತ್ರ ಸಮದ್ (13) ಮೃತಪಟ್ಟವರು. ಮಧ್ಯಾಹ್ನ ಸಮೀಪ ನಿವಾಸಿಗಳಾದ ಮೂವರು ವಿದ್ಯಾರ್ಥಿಗಳು ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಈ ಅವಘಡ ನಡೆದಿದೆ.

ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನೀರುಪಾಲಾಗಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಸೈಫುದ್ದೀನ್ ನೇತೃತ್ವದ ಸ್ಕೂಬಾ ತಂಡವು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿದರೂ ಮೂವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗಾರದಲ್ಲಿರಿಸಲಾಗಿದೆ.

About The Author

Leave a Reply