ಬಂಟ್ವಾಳ: ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ ಅವರ ನೇತೃತ್ವದ ನಿಯೋಗದಿಂದ ಬಂಟ್ವಾಳ ತಾಲೂಕಿನ ತಾಳಿಪಡ್ಪು ಮತ್ತು ತುಂಬೆಯ ನೇತ್ರಾವತಿ ನದಿ ದಡದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ದಂಧೆ ತಡೆಗಟ್ಟಲು ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಅಕ್ರಮ ಮರಳುಗಾರಿಕೆಯ ಸುತ್ತ ಮುತ್ತ ರೈಲ್ವೇ ಬ್ರಿಡ್ಜ್, ಎರಡು ಸಂಚಾರ ಸೇತುವೆ ಮತ್ತು ವೆಂಟೆಡ್ ಡ್ಯಾಂ ಇದ್ದು ಮರಳುಗಾರಿಕೆಯಿಂದ ಶಿಥಿಲವಾಗುವ ಸಾಧ್ಯತೆಯಿದೆ. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಮತ್ತು ಈ ಅಕ್ರಮ ಮರಳುಗಾರಿಕೆ ದಂಧೆ ವಿರುದ್ಧ ಮೌನ ವಹಿಸಿದ್ದಾರೆ ಎಂಬುದು ವಿಪರ್ಯಾಸ.
ಆದುದರಿಂದ ತಾಲೂಕು ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸಬೇಕು ಮತ್ತು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಎಸ್ ಡಿ ಪಿ ಐ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಕಾನೂನು ಹೋರಾಟವನ್ನು ಮಾಡಲಿದೆ ಮತ್ತು ಸಾರ್ವಜನಿಕರನ್ನು ಸೇರಿಸಿ ಅಕ್ರಮ ಮರಳುಗಾರಿಕೆ ಚಟುವಟಿಕೆಯನ್ನು ತಡೆಯಲು ಸಿದ್ದರಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾಧಿಕಾರಿ ಯಾಸಿರ್ ಕಲ್ಲಡ್ಕ, ಸಮಿತಿ ಸದಸ್ಯರಾದ ಇಕ್ಬಾಲ್ ಇಝಾನ್, ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಉಪಾಧ್ಯಕ್ಷರಾದ ಯೂಸುಫ್ ಆಲಡ್ಕ ಮತ್ತು ಸಮಿತಿ ಸದಸ್ಯರಾದ ಫಿರೋಜ್ ಗೂಡಿನಬಳಿ ಉಪಸ್ಥಿತರಿದ್ದರು.