
ಬೆಂಗಳೂರು: ಚಿನ್ನಾಭರಣ ಪಡೆದು ಹಣ ನೀಡದೇ ವಂಚಿಸಿದಂತ ಆರೋಪದಲ್ಲಿ ಈಗಾಗಲೇ ಐಶ್ವರ್ಯಾಗೌಡ ಹಾಗೂ ಅವರ ಪತಿಯನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಶಿಲ್ವಾಗೌಡ ಎಂಬುವರಿಗೆ ವಂಚಿಸಿದಂತ ಸಂಬಂಧ ದಾಖಲಾಗಿದ್ದಂತ ದೂರು ಹಿನ್ನಲೆಯಲ್ಲಿ ಮತ್ತೆ ಬಂಧಿಸಲಾಗಿದೆ.



ಬೆಂಗಳೂರಿನ ಶಿಲ್ಪಾಗೌಡ ಎಂಬುವರಿಂದ 430 ಗ್ರಾಂ ಚಿನ್ನ ಪಡೆದಿದ್ದಂತ ಐಶ್ವರ್ಯಾಗೌಡ ಅದರ ಹಣವನ್ನು ನೀಡದೇ ವಂಚಿಸಿದ್ದರು. 430 ಗ್ರಾಂ ಚಿನ್ನದ ಬೆಲೆ 3.50 ಕೋಟಿಯಾಗಿತ್ತು. ಈ ಸಂಬಂಧ ಶಿಲ್ಪಾಗೌಡ ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು.
ಐಶ್ವರ್ಯಾಗೌಡ ಅವರು ಚಿನ್ನಪಡೆದು ಹಣ ವಂಚಿಸಿದ ಸಂಬಂಧ ಶಿಲ್ಪಾಗೌಡ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಆರ್ ಆರ್ ನಗರ ಠಾಣೆಯ ಪೊಲೀಸರು ಐಶ್ವರ್ಯಾಗೌಡ ಹಾಗೂ ಪತಿಯನ್ನು ಮತ್ತೆ ಬಂಧಿಸಿದ್ದಾರೆ.