
ವಾಸವಿಲ್ಲದ ಮನೆಯೊಂದರ ಪ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಈ ಜಾಗವನ್ನು ಸಮಾಜಘಾತುಕ ಶಕ್ತಿಗಳ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರದೇಶ ಪಂಚಾಯತಿ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆ ಪೊಲೀಸರು ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಮನೆಯೊಳಗೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಫ್ರಿಡ್ಜ್ ಬಾಗಿಲು ತೆರೆದಾಗ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.



ಮೂಳೆಗಳನ್ನು ಮೂರು ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ. ತಲೆಬುರುಡೆಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ. ನಿಖರವಾದ ವಯಸ್ಸನ್ನು ಪರೀಕ್ಷೆಯ ನಂತರವೇ ನಿರ್ಧರಿಸಬಹುದಾಗಿದೆ. ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಫ್ರಿಡ್ಜ್‌ನಲ್ಲಿ ಕಂಪ್ರೆಸರ್ ಇರಲಿಲ್ಲ ಎಂದು ತಿಳಿದುಬಂದಿದೆ.