
ಮಂಗಳೂರು: ಆರು ಮಂದಿ ಮೋಸ್ಟ್ ವಾಂಟೆಡ್ ನಕ್ಸಲ್ ಶರಣಾಗತಿ ವಿಚಾರದಲ್ಲಿ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, ಯಾರಾದರೂ ಸರಿಯಾಗುತ್ತೇನೆ ಎಂದು ಮುಂದೆ ಬಂದಲ್ಲಿ ಅವರನ್ನು ಸರಿದಾರಿಗೆ ತರುವುದು ಸರ್ಕಾರದ ಮಾತ್ರವಲ್ಲ ಸಮಾಜದ ಕರ್ತವ್ಯ ಕೂಡ ಇದೆ ಎಂದು ಹೇಳಿದರು. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರಾಜ್ಯದಲ್ಲಿ 6 ಮಂದಿ ನಕ್ಸಲರು ಹೊಸ ಜೀವನ ಪ್ರಾರಂಭ ಮಾಡಲು ಶರಣಾಗತಿ ಆಗುತ್ತಿರುವುದು ಸಂತೋಷದ ವಿಚಾರ. ಶರಣಾಗತಿ ಎಲ್ಲಿ ಆಗಬೇಕೆಂದು ಸರ್ಕಾರ ತೀರ್ಮಾನ ಮಾಡುತ್ತದೆ. ಅವರನ್ನು ದೂರ ಇಡೋದು ಸರಿಯಲ್ಲ. ನಾವು ಎಲ್ಲವನ್ನೂ ಸಕಾರಾತ್ಮಕ ತೆಗೆದುಕೊಳ್ಳಬೇಕು ಎಂದರು. ದಾರಿತಪ್ಪಿದವರು ಮತ್ತೆ ಸರಿದಾರಿಗೆ ಬಂದಲ್ಲಿ ಕಾನೂನಾತ್ಮಕವಾಗಿ ಸರಿ ಮಾಡಬೇಕು. ಹಿಂದೆ ದೇಶ ಮಟ್ಟದಲ್ಲೂ ನಕ್ಸಲರು ಶರಣಾಗತಿ ಆಗಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.


