
ಕಡಬ: ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆ ಸಂಪೂರ್ಣ ಸುಟ್ಟ ಕರಕಲಾದ ಘಟನೆ ಕಡಬ ತಾಲೂಕು ಆಲಂಕಾರು ಗ್ರಾಮದ ನೆಕ್ಕಿಲಾಡಿಯಲ್ಲಿ ನಡೆದಿದೆ.



ವಿನೋದಾ ಅವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ವಿನೋದಾ ಅವರು ಪತಿಯನ್ನು ಕಳೆದುಕೊಂಡ ಬಳಿಕ ಇಬ್ಬರು ಮಕ್ಕಳೊಂದಿಗೆ ಚಿಕ್ಕದೊಂದು ಹಂಚಿನ ಮನೆಯಲ್ಲಿ ವಾಸವಾಗಿದ್ದರು. ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವದ ಕಾರಣ ಹೊಗಿದ್ದು ಮಕ್ಕಳ ಕಾರ್ಯಕ್ರಮ ನೋಡುವ ಸಲುವಾಗಿ ಕೂಲಿ ಕೆಲಸ ಮುಗಿಸಿ ವಿನೊದ ಅವರು ಶಾಲೆಗೆ ತೆರಳಿದ್ದರು.
ಸುಮಾರು ರಾತ್ರಿ 8 ರ ವೇಳೆ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಅವಘಡ ಸಂಭವಿಸಿದ್ದು ಸ್ಥಳೀಯರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮನೆ ಕಡೆ ತೆರಳಿ ಪರಿಶೀಲಿಸಿದಾಗ ಬೆಂಕಿ ಮನೆಯೊಳಗೆ ಆವರಿಸಿರೋದು ಗೊತ್ತಾಗಿದೆ.ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು ನೀರು ಹಾಕಿದ್ದರು.
ಮನೆಯ ಸೋಫಾ, ಬಟ್ಟೆ ಬರೆಗಳು ಬೆಂಕಿಗೆ ಆಹುತಿಯಾಗಿತ್ತು. ಹೊರಗಡೆ ಒಣಗಳು ಹಾಕಿದ್ದ ಬಟ್ಟೆ ಮಾತ್ರ ಉಳಿದಿದ್ದು ಮಕ್ಕಳ ಪುಸ್ತಕಗಳು ಬೆಂಕಿಗೆ ಆಹುತಿಯಾಗಿದೆ. ಜೊತೆಗೆ ಅಮೂಲ್ಯ ದಾಖಲೆಗಳು ಸುಟ್ಟು ಹೋಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪಂಚಾಯತಿ ಆಡಳಿಯ ಮಂಡಳಿ, ಅಧಿಕಾರಿಗಳು, ತೆರಳಿ ಪರಿಶೀಲನೆ ನಡೆಸಿದ್ದಾರೆ.