August 30, 2025
WhatsApp Image 2024-11-05 at 10.12.25 AM

ಮಂಗಳೂರು : ನಕ್ಸಲ್ ಶರಣಾಗತಿ ಪ್ರಕ್ರಿಯೆ ಬಗ್ಗೆ ಅಣ್ಣಾಮಲೈ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹೌದು ನಕ್ಸಲ್ ಶರಣಾಗತಿ ಬಗ್ಗೆ ಅನುಮಾನವಿದೆ ಎಂದಿದ್ದ ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ, ನಕ್ಸಲ್ ಶರಣಾಗತಿಯ ಪ್ರಕ್ರಿಯೆ ವಿರುದ್ಧ ಕಿಡಿ ಕಾರಿದ್ದಾರೆ.

ಅಣ್ಣಮಲೈ ಶರಣಾಗತಿ ಪ್ರಕ್ರಿಯೆ ಬಗ್ಗೆ ತನಿಖೆಗೆ ಆಗ್ರಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಶರಣಾಗತಿ ವೇಳೆ ನಕ್ಸಲರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಇಷ್ಟು ದಿನ ಸರಕಾರದ ವಿರುದ್ಧ ಹೋರಾಟ ಮಾಡಿದವರನ್ನ ನಾಗರಿಕ ಸಮಾಜದೊಳಗೆ ಹೇಗೆ ಬಿಡುತ್ತಿರ ? ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಅಣ್ಣಾಮಲೈ ಆರೋಪಕ್ಕೆ ಮಂಗಳೂರಿನಲ್ಲೇ ಸಿದ್ದು ತಿರುಗೇಟು ನೀಡಿದ್ದಾರೆ. ಅಣ್ಣಮಲೈ ಮಾಜಿ ಎಸ್ಪಿಯಾಗಿರಬಹುದು ಆದರೆ ಇವಾಗ ಅವರು ರಾಜಕಾರಣಿ.

ಅಣ್ಣಾಮಲೈ ಎಸ್ಪಿಯಾಗಿದ್ದಾಗ ರಾಜಕಾರಣದಲ್ಲಿದ್ರಾ? ಈಗ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ನಕ್ಸಲರು ಶರಣಾಗಿದ್ದಾರೆ ಕಾಡಿನಿಂದ ಕೋರ್ಟ್ ಗೆ ಕಳಿಸಿ ಕೋರ್ಟ್ ನಿಂದ ನಾಡಿಗೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ.

ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಬೇಕು ನಕ್ಸಲರು ಶಾಂತಿಯುತವಾಗಿ,ಸಂವಿಧಾನಿಕವಾಗಿ ಹೋರಾಟ ಮಾಡೋದಕ್ಕೆ ನಮ್ಮ ತಕರಾರಿಲ್ಲ ಎಂದು ಮಂಗಳೂರಿನ ನರಿಂಗಾನ ಕಂಬಳ ಭೇಟಿ ವೇಳೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

About The Author

Leave a Reply