
ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿ ಒಬ್ಬನನ್ನು ಇಬ್ಬರು ಹಂತಕರು ಕೊಂದಿದ್ದಾರೆ. ಬಳಿಕ ಇದು ಸಹಜ ಸಾವು ಎಂದು ಬಿಂಬಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಆಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಮೂಡಲಗಿ ಬಾರ್ ಒಂದರಲ್ಲಿ ಈ ಒಂದು ಘಟನೆ ಸಂಭವಿಸಿದೆ.



ಲಕ್ಷ್ಮಣ್ ಮರಣೂರು ಎನ್ನುವ ವ್ಯಕ್ತಿಯ ಕೊಲೆಯಾಗಿದ್ದು, ರಂಗಪ್ಪ ಪಾಟೀಲ್ ಮತ್ತು ಈರಪ್ಪ ತುಂಗಳ ಅವರು ಲಕ್ಶ್ಮಣ ಜೊತೆ ಗಲಾಟೆ ಮಾಡಿದ್ದಾರೆ. ಇಬ್ಬರು ಸಹ ಲಕ್ಷ್ಮಣನ ಜೊತೆ ಜಗಳ ಮಾಡಿದ್ದು, ಹಲ್ಲೆ ನಡೆಸಿ ಕೊಂದಿದ್ದಾರೆ.
ಲಕ್ಷ್ಮಣ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಕೂಡ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳೀಯರ ಒಬ್ಬರ ಮೊಬೈಲಲ್ಲಿ ಈ ಒಂದು ವಿಡಿಯೋ ಸೆರೆಯಾಗಿದೆ. ರಂಗಪ್ಪ ಪಾಟೀಲ್ ಮತ್ತು ಈರಪ್ಪ ತುಂಗಳ ಕೊಲೆ ಆರೋಪಿಗಳು, ಕೊಲೆ ಮಾಡಿ ಇದು ಸಹಜ ಸಾವು ಎಂದು ಬೆಂಬಲಿಸಲು ಇಬ್ಬರು ಆರೋಪಿಗಳು ಮುಂದಾಗಿದ್ದರು. ಆದರೆ ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.