November 8, 2025
WhatsApp Image 2025-01-14 at 1.54.13 PM

ಅಂತಾರಾಷ್ಟ್ರೀಯ ಕರಾಟೆ,ಮುಕ್ತ ಬಾಲಕರ “ಕುಮಿಟೆ”ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮುಅದ್ ಮಂಚಿಗೆ ಕೊಳ್ನಾಡು, ಕೊಳ್ನಾಡು,ಮಂಚಿ ಗ್ರಾಮ ಪಂಚಾಯತ್ ಉಪಾದ್ಯಕ್ಷರಿಂದ ಜಂಟಿಯಾಗಿ ಅಭಿನಂದನೆ ಸಲ್ಲಿಸಿದರು

ಕೆ.ಬಿ.ಎಲ್. ಅಂತರಾಷ್ಟ್ರೀಯ ಮುಕ್ತ ವಿಭಾಗದ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಪ್ರಾಥಮಿಕ ವಿಭಾಗದಲ್ಲಿ ಭಾರತದ ಪರವಾಗಿ ಚಿನ್ನದ ಪದಕ ಗೆದ್ದ ಮುಅದ್ ಮಹಮ್ಮದ್ ಯೂಸುಫ್ ಮನೆಗೆ ತಾಲೂಕು ಸುಗ್ರಾಮದ ಸದಸ್ಯರೂ ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ. ಎ.ಅಸ್ಮ ಹಸೈನಾರ್,ಮಂಚಿ ಗ್ರಾಮ ಪಂಚಾಯತ್ ಸ್ಥಳೀಯ ಸದಸ್ಯರೂ,ಉಪಾದ್ಯಕ್ಷರಾದ ಗೀತಾ ಸಾಲಿಯಾನ್ ಬೇಟಿ ಅಭಿನಂದನೆ ಸಲ್ಲಿಸಿದರು

RBKA ಕರ್ನಾಟಕ,ಇಂಡಿಯಾ, ಆಯೋಜಿಸಿರುವ,ಕರಾಟೆ BUDOKAN OF ಇಂಡಿಯಾ ಸಂಯೋಗದಲ್ಲಿ ಇತ್ತೀಚೆಗೆ ಉಡುಪಿಯ ಬೈಂದೂರಿನ ಎನ್.ಆರ್.ಕಲಾಮಂದಿರದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ ಸ್ಪರ್ದೆಯ ಬಾಲಕರ “ಕುಮಿಟೆ” ವಿಭಾಗದಲ್ಲಿ ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಮಂಗಳೂರಿನ ವಿದ್ಯಾರ್ಥಿ ಮುಅದ್ ಮಹಮ್ಮದ್ ಯೂಸುಫ್ ಮಂಚಿ ಬಂಟ್ವಾಳದ ಎರಡನೇ ತರಗತಿಯ ವಿದ್ಯಾರ್ಥಿ ಬಾರತದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಮಲೇಷಿಯಾದ ಎದುರಾಲಿಯನ್ನು ಸೋಲಿಸಿ ಚಿನ್ನದ ಪದಕದ ಸಾದನೆ ಮಾಡಿರುತ್ತಾನೆ.ಈತ ಮಂಚಿ ಗ್ರಾಮದ ನಿವಾಸಿ ಮಹಮ್ಮದ್ ಹನೀಪ್ ಹಾಗೂ ಸೆಮೀಮಾ ದಂಪತಿಯ ಪುತ್ರನಾಗಿರುತ್ತಾನೆ.ಇವನಿಗೆ ಕೋಚ್ ಆಗಿ Noble world ರೆಕಾರ್ಡ್,Chief Instructor of shorin RYU ಕರಾಟೆ ಅಸೋಸಿಯೇಷನ್, ಅದ್ಯಕ್ಷರು ರಾಜ್ಯ ಕರಾಟೆ ಶಿಕ್ಷಕರ ಸಂಘದ ಮಹಮ್ಮದ್ ನದೀಂ ತರಬೇತುದಾರರ ಗರಡಿಯಲ್ಲಿ ಪಳಗಿರುವುದು ಸಾಧನೆಗೆ ಒಂದು ಅಡಿಪಾಯವಾಗಿದೆ.ಇವನ ದೊಡ್ಡ ಸಹೋದರಿ ಮರಿಯಂ ಕೂಡ ಪ್ರತಿಬಾನ್ವಿತ ಕರಾಟೆ ಪಟುವಾಗಿರುವುದು ಇವನಿಗೆ ಪ್ರಶಸ್ತಿ ಗೆಲ್ಲಲು ವರದಾನವಾಗಿದೆ.ಮುಂದೆ ಥಾಯಿಲ್ಯಾಂಡ್ ನಡೆಯುವ ಸ್ಪರ್ಧೆಗೆ ತರಬೇತುದಾರರು ಹೆಚ್ಚಿನ ತರಬೇತಿಯನ್ನು ನೀಡಲು ಶಾಲಾಡಳಿತ ಮಂಡಳಿ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.

ಚಿನ್ನದ ಪದಕ ಗೆದ್ದ ಬಾಲಕನಿಗೆ ಜಿಲ್ಲಾಡಳಿತದಿಂದ ಗೌರವಿಸುವ ಬಗ್ಗೆ ಸ್ಥಳೀಯ ಗ್ರಾ.ಪಂಚಾಯತ್ ಮಂಚಿ ಇದರ ಅದ್ಯಕ್ಷರಾದ ಜಿ.ಎಂ.ಇಬ್ರಾಹಿಂ ಹಾಗೂ ಅಭಿವೃದ್ದಿ ಅಧಿಕಾರಿಗೆ ಮೌಖಿಕ ಮನವಿ ಸಲ್ಲಿಸಲಾಯಿತು.‌ಈ ಸಂದರ್ಭದಲ್ಲಿ ಸಾಮಾಜಿಕ ಮುಖಂಡರಾದ ಹಸೈನಾರ್ ತಾಳಿತ್ತನೂಜಿ ಉಪಸ್ಥಿತರಿದ್ದರು.

About The Author

Leave a Reply