August 30, 2025
WhatsApp Image 2025-01-28 at 1.37.55 PM

ಬೆಂಗಳೂರು: ಫೆಬ್ರವರಿ 26 ರಂದು ಬೆಂಗಳೂರಿನ ಶ್ರೀನಗರ ಪ್ಯಾಲೇಸ್, ಪ್ಯಾಲೇಸ್ ಗ್ರೌಂಡ್ ನಲ್ಲಿ ಬ್ಯಾರಿ ಕೂಟ”ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ …” ಕಾರ್ಯಕ್ರಮ ನಡೆಯಲಿದ್ದು, ಇದರ ಅಧಿಕೃತ ಪೋಸ್ಟರ್ ಅನ್ನು ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ ಇಂದು ತಮ್ಮ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ಬಿಸಿಸಿ ಅಧ್ಯಕ್ಷ ಶಬೀರ್ ಬ್ರಿಗೇಡ್, ಕಣಚೂರು ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಕಣಚೂರು ಮೋನು ಹಾಗು ಬಿಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ಒಳಗೊಂಡ ಬಿಸಿಸಿ ಯ ನಾಯಕರು ಜೊತೆಯಾದರು.

ಬ್ಯಾರಿ ಸೆಂಟ್ರಲ್ ಕಮಿಟಿ ಯ ಒಂದನೇ ವರ್ಷದ ಅಂಗವಾಗಿ ಬೆಂಗಳೂರಿನಲ್ಲಿ ವಾಸಿಸುವ ಎಲ್ಲಾ ಅನಿವಾಸಿ ಬ್ಯಾರಿಗಳನ್ನು ಒಟ್ಟು ಸೇರಿಸಿ ಇದೇ ಬರುವ ಫೆಬ್ರವರಿ 26 ಕ್ಕೆ ಬ್ಯಾರಿ ಕೂಟ “ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ …” ಎಂಬ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಈ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಧ್ವಜಾರೋಹಣದ ಮೂಲಕ ಆರಂಭಗೊಂಡು, ಸೆಮಿನಾರ್, ವಸ್ತು ಪ್ರದರ್ಶನ, ರಕ್ತದಾನ, ಬ್ಯಾರಿ ಫುಡ್ ಫೆಸ್ಟಿವಲ್, ಮಕ್ಕಳಿಗಾಗಿ ವಿವಿಧ ಸ್ಪರ್ಧೆ, ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಗಣ್ಯವ್ಯಕ್ತಿಗಳನ್ನು ಒಳಗೊಂಡ ಸಭಾ ಕಾರ್ಯಕ್ರಮದೊಂದಿಗೆ ಯಶಸ್ವಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಬೆಂಗಳೂರಿನದ್ಯಂತ ಇರುವ ಎಲ್ಲಾ ಬ್ಯಾರಿಗಳನ್ನು ಆಮಂತ್ರಿಸುತ್ತಿದ್ದೇವೆ ಎಂದು ಆಯೋಜಕರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.

About The Author

Leave a Reply