
ಹಲವಾರು ಸಮಾಜಮುಖಿ ಕಾರ್ಯದೊಂದಿಗೆ ಮುನ್ನಡೆಯುತ್ತಿರುವ ಮತ್ತು ನೊಂದ ಜೀವಗಳಿಗೆ ಆಸರೆಯಾಗುತ್ತಿರುವ ಡೀಸೆಂಟ್ ಪ್ರೆಂಡ್ಸ್ ನಾರ್ಶ ಕೊಳ್ನಾಡು ವತಿಯಿಂದ ಕ್ರಿಕೆಟ್ ಪಂಧ್ಯಾಕೂಟ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಿ ನಾರ್ಶ ಮೈದಾನದಲ್ಲಿ ಜರಗಿತು.



ಪ್ರತೀ ವರ್ಷ ಊರಿನ ಯುವಕರನ್ನು ಒಗ್ಗೂಡಿಕೊಂಡು,ಪ್ರತೀಯೊಂದು ಸ್ಥಳಿಯ ಸಂಘ ಸಂಸ್ಥೆಗಳನ್ನು ಸಹಭಾಗಿತ್ವವ ಸೇರಿಸಿಕೊಂಡು ಊರಿನಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯ ಉಳಿವಿಗಾಗಿ ಎಲ್ಲಾ ಜನಾಂಗವನ್ನು ಸೇರಿಸಿಕೊಂಡು ಸಾಮರಸ್ಯವನ್ನು ಬೆಳೆಸುವ ಉಳಿಸುವ ನಿಟ್ಟಿನಲ್ಲಿ ಊರಿಗೆ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಯಶಸ್ವಿ ಕ್ರಿಕೆಟ್ ಪಂಧ್ಯಾಕೂಟ ನಡೆಯಿತು
ಬೆಳಿಗ್ಗೆ 9:00ಗಂಟೆಗೆ ಸರಿಯಾಗಿ ಡೀಸೆಂಟ್ ಪ್ರೆಂಡ್ಸ್ ನಾರ್ಶ ಇದರ ಗೌರವ ಅಧ್ಯಕ್ಷರಾದ ಎಂ,ಎಸ್ ಮಹಮ್ಮದರ ಅಧ್ಯಕ್ಷತೆಯಲ್ಲಿ ಮತ್ತು ಸಂಜೆ 5:00ಗಂಟೆಗೆ ನಿವೃತ್ತ ಶಿಕ್ಷಕರಾದ ಶ್ರೀ ಗೋಪಾಲ್ ರಾವ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರ ಕಾರ್ಯಕ್ರಮ ನಡೆಯಿತು
ಈ ಸಂಧರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೋಪಾಲ್ ಕೃಷ್ಣ ನೇರಳಕಟ್ಟೆ,ಡೀಸೆಂಟ್ ತಂಡದ ಮಾಜಿ ಆಟಗಾರರಾದ ಹಮೀದ್ ನಾರ್ಶ,ವಿಶ್ವನಾಥ ಕಯ್ಯ (ಚಂದ್ರ) ದೈಹಂದ ಹಿತ್ತಿಲು,ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕ ಇಬ್ರಾಹಿಂ ಕರೀಂ ಕದ್ಕಾರ್,ನಾರ್ಶ ಪ್ರೌಢ ಶಾಲೆಯ ಹಳೆಯ ವಿಧ್ಯಾರ್ಥಿ ಫಯಾಝ್ ಎನ್ ಸಿ ರೋಡ್ ರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ನಾಲ್ಕನೇ ಆವೃತ್ತಿಯ ಚಾಂಪಿಯನ್ ಪ್ರಶಸ್ತಿಯನ್ನು ಡೀಸೆಂಟ್ ಪ್ರೆಂಡ್ಸ್ ನಾರ್ಶ ಪಡೆಕೊಂಡಿತು,ದ್ವಿತೀಯ ಪ್ರಶಸ್ತಿಯನ್ನು ಇಲೆವೆನ್ ಸ್ಟಾರ್ ಕೆ.ಪಿ ಬೈಲ್ ತಂಡ ಪಡೆದು ಕೊಂಡಿತು ಹಾಗೂ ಉತ್ತಮ ಆಲ್ ರೌಂಡರ್ರಾಗಿ ಡೀಸೆಂಟ್ ತಂಡದ ಕಲೀಲ್,ಉತ್ತಮ ದಾಳಿಗಾರನಾಗಿ ಅನ್ಸಾರ್ ಸೆವೆನ್ ಸ್ಟಾರ್ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಹಾರೀಸ್ ಕೆ.ಎನ್ ಸ್ಟೈಕರ್ಸ್,ಉತ್ತಮ ಶಿಸ್ತು ಬದ್ಧ ಆಟಗಾರ ಪ್ರಶಸ್ತಿಯನ್ನು ಡೀಸೆಂಟ್ ತಂಡದ ಮನ್ಸೂರ್ ಪಡೆದು ಕೊಂಡರು.
ಬೆಳಿಗ್ಗೆಯ ಮತ್ತು ಸಂಜೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮನಾಥ ರೈ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಪ್ ಸಾಲೆತ್ತೂರು, ಮಂಚಿ ಪ್ರೌಢ ಶಾಲೆ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ದ.ಕ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಬ್ಬಾಸ್ ಆಲಿ,ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ C H ರಝಾಕ್ ಸೆರ್ಕಳ,ಹಮೀರ್ ಸುರಿಬೈಲ್,ಚಂದ್ರ ಶೇಖರ ರೈ ನಾರ್ಶ,ಲಯನ್. ಶಶಿಧರ್ ಕೆ,ಅಸೈನಾರ್ ತಾಳಿತನ್ನೂಜಿ, ಲಉಮ್ಮರ್ ಕುಂಞಿ ಸಾಲೆತ್ತೂರು, ರಫೀಕ್ ಪವಿತ್ರ,ರಝಾಕ್ ಸುರಿಬೈಲ್,ಯಾಕುಬ್ ನಾರ್ಶ,ಝಕರೀಯ ನಾರ್ಶ,ವಿಶ್ವನಾಥ ರೈ ನಾರ್ಶ, ಅಫೀಝ್ ಸಾಲೆತ್ತೂರು, ಅಬ್ದುಲ್ ರಹಿಮಾನ್ ಸಾಲೆತ್ತೂರು,ಶರೀಫ್ ಸೆರ್ಕಳ,ಇಬ್ರಾಹಿಂ ಹೊಸಮನೆ ನಾರ್ಶ,ಅಬ್ಬೈ ನಾರ್ಶ,ಅಸೈನಾರ್ ಅಕ್ಕರೆ,ರಪೀಕ್ ಮಾಸ್ಟರ್ ಉಪ್ಪಿನಂಗಡಿ,ರಝಾಕ್ ಕೆ.ಪಿ ಬೈಲ್,ಬಶೀರ್ ದರ್ಕಾಸ್, ಉದಯ ರಾಜ್ ದೈಹಂದ ಹಿತ್ತಿಲು,ಮಜೀದ್ ಕೆ.ಪಿ ಬೈಲ್,ಉಮ್ಮರ್ ಕೆ.ಪಿ ಬೈಲ್,ಉಮ್ಮರ್ ಹೊಸಮನೆ ನಾರ್ಶ,ಸಂಶುದ್ದೀನ್ ಕೆ.ಪಿ ಬೈಲ್ ಭಾಗವಹಿಸಿ ಶುಭ ಹಾರೈಸಿದರು,ಕಾರ್ಯಕ್ರಮದಲ್ಲಿ ಖಾದರ್ ನಾರ್ಶ ಸ್ವಾಗತಿಸಿ,ಇಕ್ಬಾಲ್ ಸುರಿಬೈಲ್ ನಿರೂಪಿಸಿದರು