ಬಂಟ್ವಾಳ: ತನ್ನದೇ ಗನ್‌ ನಿಂದ ಮಿಸ್‌ ಫೈರ್‌; ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿಗೆ ಗಾಯ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರಿಗೆ ಫೆ. 4ರ ಮಂಗಳವಾರ ಗುಂಡೇಟು ತಗಲಿದೆ. ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಅನಂತಾಡಿ ಎಂಬಲ್ಲಿ ಘಟನೆ ನಡೆದಿದ್ದು, ಫೈರಿಂಗ್‌ ಬಗ್ಗೆ ನಾನಾ ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ನಡೆದಿದೆ.

ಅನಂತಾಡಿ ಬಳಿ ಕಲ್ಲಿನ ಕೋರೆ ಇದ್ದು ಇದರ ಮೇಲ್ವಿಚಾರಣೆಯನ್ನು ಚಿತ್ತ ರಂಜನ್‌ ಅವರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ . ಮಂಗಳವಾರ ಕೂಡ ಇದರ ಮೇಲ್ವಿಚಾರಣೆ ನೋಡಲು ಚಿತ್ತರಂಜನ್‌ ಕಲ್ಲಿನ ಕೋರೆ ಬಳಿ ಬಂದಿದ್ದಾರೆ. ಒಂದು ಮೂಲದ ಪ್ರಕಾರ ಈ ವೇಳೆ ಅವರು ತನ್ನ ಬಳಿಯಿದ್ದ  ಗನ್‌ ಅನ್ನು ಜತೆಗೆ ತಂದಿದ್ದರು ಎನ್ನಲಾಗಿದೆ. ಇದನ್ನು ತೆಗೆದು ಪರಿಶೀಲನೆ ನಡೆಸುತ್ತಿದ್ದಾಗ ಮಿಸ್‌ ಫೈರ್‌ ಆಗಿ ಅವರಿಗೆ ಗುಂಡೇಟು ತಗಲಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದ್ದು ಪೊಲೀಸ್‌ ಇಲಾಖೆ ಇದನ್ನು ಖಚಿತಪಡಿಸಬೇಕಿದ್ದೆ. ಇನ್ನು  ಚಿತ್ತರಂಜನ್ ಶೆಟ್ಟಿ ಹೊಂದಿದ್ದ ಗನ್‌ ಗೆ ಪರವಾನಿಗೆ ಹೊಂದಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅವರ ಶತ್ರುಗಳು ಯಾರದರೂ ಗುಂಡು ಹೊಡೆದಿರಬಹುದೇ ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದು , ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ  ಪೊಲೀಸರು ಕೂಡ ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಗುಂಡೇಟುನಿಂದ ಚಿತ್ತರಂಜನ್‌ ಶೆಟ್ಟಿಯವರ ತೊಡೆ ಭಾಗಕ್ಕೆ  ಗಾಯವಾಗಿರುವುದಾಗಿ ಹೇಳಲಾಗುತ್ತಿದ್ದು,  ಅವರನ್ನು ಮಂಗಳೂರಿನ  ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ಚಿತ್ತರಂಜನ್‌ ಶೆಟ್ಟಿಯವರು ಜಿಲ್ಲಾ ಕಾಂಗ್ರೆಸ್‌ ನಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದು , ಇಂಟಕ್‌  ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು.

ಬಂಟ್ವಾಳದ ಬಿಸಿರೋಡಿನಲ್ಲಿ ವಾಸಿಸುತ್ತಿದ್ದ ಚಿತ್ತರಂಜನ್‌ ಶೆಟ್ಟಿ ಜನಪ್ರಿಯ ರಾಜಕಾರಣಿಯಾಗಿದ್ದರು . ಹೀಗಾಗಿ ಅವರಿಗೆ ಗುಂಡೇಟು ತಗಲಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿತ್ತು. ಆದರೇ ಸದ್ಯ ಕುಟುಂಬದ ಮೂಲಗಳಿಂದ ದೊರಕಿರುವ ಮಾಹಿತಿ ಪ್ರಕಾರ ಅವರಿಗೆ ಸಣ್ಣಮಟ್ಟದ ಗಾಯವಾಗಿದ್ದು ಆಪಾಯದಿಂದ ಪಾರಾಗಿದ್ದಾರೆ.

Leave a Reply